ಭಾರತಕ್ಕೆ 17 ರನ್ಗಳ ರೋಚಕ ಜಯ
ನಿದಾಸ್ ಟ್ವೆಂಟಿ -20 ತ್ರಿಕೋನ ಸರಣಿಯ ಫೈನಲ್ ಪ್ರವೇಶಿದ ಭಾರತ
ಕೊಲಂಬೊ, ಮಾ.14: ನಿದಾಸ್ ತ್ರಿಕೋನ ಟ್ವೆಂಟಿ-20 ಸರಣಿಯ ಐದನೇ ಪಂದ್ಯದಲ್ಲಿ ಭಾರತ ಇಂದು ಬಾಂಗ್ಲಾ ದೇಶ ತಂಡದ ವಿರುದ್ಧ 17 ರನ್ಗಳ ರೋಚಕ ಜಯ ಗಳಿಸಿದೆ.ಇದರೊಂದಿಗೆ ಭಾರತ ಫೈನಲ್ ಪ್ರವೇಶಿಸಿದೆ.
ಗೆಲುವಿಗೆ 177 ರನ್ ಗಳಿಸಬೇಕಿದ್ದ ಬಾಂಗ್ಲಾ ತಂಡ ನಿಗದಿತ 20 ಓವರ್ಗಳಲ್ಲಿ 159ರನ್ ಗಳಿಸಿದೆ.
ಬಾಂಗ್ಲಾ ತಂಡದ ವಿಕೆಟ್ ಕೀಪರ್ ಮುಶ್ಫಿಕುರ್ರಹೀಮ್ ಔಟಾಗದೆ 72 ರನ್ (55ಎ, 8ಬೌ,1ಸಿ) ಗಳಿಸಿ ಹೋರಾಟ ನಡೆಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ.
ಇದಕ್ಕೂ ಮೊದಲು ಭಾರತ ನಾಯಕ ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾ ಎರಡನೇ ವಿಕೆಟ್ಗೆ ದಾಖಲಿಸಿದ 102 ರನ್ಗಳ ಜೊತೆಯಾಟ ನೆರವಿನಲ್ಲಿ ಭಾರತ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 176 ರನ್ ಗಳಿಸಿತ್ತು.
Next Story