ಮಿಯಾಮಿ ಓಪನ್: ಫೆಡರರ್ಗೆ ಆಘಾತಕಾರಿ ಸೋಲು
ಮಿಯಾಮಿ, ಮಾ.25: ವಿಶ್ವದ ನಂ.1 ಆಟಗಾರ ರೋಜರ್ ಫೆಡರರ್ ಮಿಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ಆಘಾತಕಾರಿ ಸೋಲನುಭವಿಸಿದರು.
ಆಸ್ಟ್ರೇಲಿಯದ ವೈರ್ಲ್ಡ್ಕಾರ್ಡ್ ಆಟಗಾರ ಥನಸಿ ಕೊಕ್ಕಿನಕಿಸ್ ಅವರು ಹಾಲಿ ಚಾಂಪಿಯನ್ ಫೆಡರರ್ರನ್ನು 3-6, 6-3, 3-7(4) ಸೆಟ್ಗಳಿಂದ ಸೋಲಿಸಿ ಶಾಕ್ ನೀಡಿದರು.
ಫೆಡರರ್ ಹಾಗೂ ಆರು ಬಾರಿಯ ಮಿಯಾಮಿ ಓಪನ್ ಚಾಂಪಿಯನ್ ನೊವಾಕ್ ಜೊಕೊವಿಕ್ ಟೂರ್ನಿಯಲ್ಲಿ ಈಗಾಗಲೇ ಸೋತು ನಿರ್ಗಮಿಸಿದ್ದಾರೆ. ಎರಡನೇ ಶ್ರೇಯಾಂಕದ ಮರಿನ್ ಸಿಲಿಕ್, ಗ್ರಿಗೊರ್ ಡಿಮಿಟ್ರೊವ್(3) ಹಾಗೂ ಇಂಡಿಯನ್ ವೆಲ್ಸ್ ವಿನ್ನರ್ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ(5) ಮಿಯಾಮಿ ಓಪನ್ ಪ್ರಶಸ್ತಿ ಜಯಿಸುವ ಫೇವರಿಟ್ ಆಟಗಾರರಾಗಿದ್ದಾರೆ.
Next Story