ರಾಜಸ್ಥಾನ ರಾಯಲ್ಸ್ಗೆ ಸ್ಮಿತ್ ಸ್ಥಾನಕ್ಕೆ ಕ್ಲಾಸೆನ್
ಜೈಪುರ, ಮಾ.31: ರಾಜಸ್ಥಾನ ರಾಯಲ್ಸ್ ತಂಡ ಸ್ಟೀವ್ ಸ್ಮಿತ್ ಸ್ಥಾನಕ್ಕೆ ಮುಂಬರುವ ಐಪಿಎಲ್ ಟ್ವೆಂಟಿ-20 ಟೂರ್ನಿಗೆ ದಕ್ಷಿಣ ಆಫ್ರಿಕದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಹೆನ್ರಿಕ್ ಕ್ಲಾಸೆನ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಆಸ್ಟ್ರೇಲಿಯದ ಮಾಜಿ ನಾಯಕ ಸ್ಮಿತ್ ಅವರು ಒಂದು ವರ್ಷದ ಅವಧಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿಷೇಧದ ಸಜೆ ಎದುರಿಸುತ್ತಿದ್ದಾರೆ. ಇದರ ಜೊತೆಗೆ ಐಪಿಎಲ್ನಿಂದಲೂ ಸ್ಮಿತ್ ಒಂದು ವರ್ಷದ ಮಟ್ಟಿಗೆ ಹೊರದಬ್ಬಲ್ಪಟ್ಟಿದ್ದಾರೆ.
ಕ್ಲಾಸೆನ್ 50 ಲಕ್ಷ ರೂ.ಗೆ ರಾಜಸ್ಥಾನ ರಾಯಲ್ಸ್ ತಂಡ ಸೇರ್ಪಡೆಗೊಂಡಿದ್ದಾರೆ. ಸ್ಮಿತ್ 12.5 ಕೋಟಿ ರೂ.ಗೆ ರಾಜಸ್ಥಾನ ರಾಯಲ್ಸ್ ತಂಡದ ತೆಕ್ಕೆಗೆ ಸೇರಿದ್ದರು. 2019ರ ಆವೃತ್ತಿಯಲ್ಲಿ ಸ್ಮಿತ್ ರಾಜಸ್ಥಾನ ರಾಯಲ್ಸ್ ತಂಡದ ಸೇವೆಗೆ ಲಭ್ಯರಿದ್ದಾರೆಂದು ತಂಡದ ಮೂಲಗಳು ತಿಳಿಸಿವೆ.
Next Story