ಸಿಂಧು, ಶ್ರೀಕಾಂತ್ಗೆ ಅಗ್ರ ಶ್ರೇಯಾಂಕ
ಸಿಡಬ್ಲ್ಯುಜಿ
ಗೋಲ್ಡ್ಕೋಸ್ಟ್, ಎ.3: ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಹಾಗೂ ವಿಶ್ವದ ನಂ.2ನೇ ಆಟಗಾರ ಕಿಡಂಬಿ ಶ್ರೀಕಾಂತ್ ಕಾಮನ್ವೆಲ್ತ್ ಗೇಮ್ಸ್ ಬ್ಯಾಡ್ಮಿಂಟನ್ನಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್ ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ.
ಬ್ಯಾಡ್ಮಿಂಟನ್ ಸ್ಪರ್ಧೆಗಳು ಎ.10 ರಿಂದ ಆರಂಭವಾಗಲಿದೆ. ಸಿಂಧು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದು, ಎರಡನೇ ಸುತ್ತಿನಲ್ಲಿ ರೆ ಮೊರಿಸ್ರನ್ನು ಎದುರಿಸಲಿದ್ದಾರೆ. ಸೆಮಿ ಫೈನಲ್ನಲ್ಲಿ ಗ್ಲಾಸ್ಗೊ ಗೇಮ್ಸ್ ಚಾಂಪಿಯನ್ ಮಿಚೆಲ್ಲಿ ಲೀ ಅವರನ್ನು ಎದುರಿಸುವ ಸಾಧ್ಯತೆಯಿದೆ. 2010ರ ಚಾಂಪಿಯನ್ ಹಾಗೂ ಮಾಜಿ ವಿಶ್ವದ ನಂ.1 ಆಟಗಾರ್ತಿ ಸೈನಾ ಎರಡನೇ ಶ್ರೇಯಾಂಕ ಪಡೆದಿದ್ದು, 2ನೇ ಸುತ್ತಿನಲ್ಲಿ ಎಲ್ಲಿಸ್ ಡಿವಿಲಿಯರ್ಸ್ರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ಶ್ರೀಕಾಂತ್ ಫಿಜಿಯ ಲಿಯಾಮ್ ಫಾಂಗ್ರನ್ನು ಎದುರಿಸುವ ಮೂಲಕ ಗೇಮ್ಸ್ ಅಭಿಯಾನ ಆರಂಭಿಸಲಿದ್ದಾರೆ. ಸೆಮಿ ಫೈನಲ್ನಲ್ಲಿ ರಾಜೀವ್ ಜೋಸೆಫ್ರನ್ನು ಎದುರಿಸುವ ಸಾಧ್ಯತೆಯಿದೆ.
ಎಚ್.ಎಸ್. ಪ್ರಣಯ್ 3ನೇ ಶ್ರೇಯಾಂಕ ಪಡೆದಿದ್ದು ಸೆಮಿ ಫೈನಲ್ನಲ್ಲಿ 2ನೇ ಶ್ರೇಯಾಂಕ ಪಡೆದಿರುವ ಲೀ ಚೊಂಗ್ ವೀ ಅವರನ್ನು ಎದುರಿಸಲಿದ್ದಾರೆ.