ಚಿನ್ನ ಜಯಿಸಿದ 16ರ ಬಾಲೆ ಮನು
ಗೋಲ್ಡ್ ಕೋಸ್ಟ್, ಎ.8: ಯುವ ಶೂಟರ್ ಮನು ಭಕರ್ ತನ್ನ ಚೊಚ್ಚಲ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನಕ್ಕೆ ಗುರಿ ಇಟ್ಟಿದ್ದಾರೆ. ಹರ್ಯಾಣದ 16ರ ಹರೆಯದ ಮನು ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನ ಬಾಚಿಕೊಂಡರು. ಬೆಲ್ಮೋಂಟ್ ಶೂಟಿಂಗ್ ಸೆಂಟರ್ನಲ್ಲಿ ನಡೆದ ಸ್ಪರ್ಧೆಯಲ್ಲಿ 240.9 ಪಾಯಿಂಟ್ ಕಲೆ ಹಾಕಿ ದಾಖಲೆ ನಿರ್ಮಿಸಿದರು.
Next Story