ಅಗ್ರ 100 ರ್ಯಾಂಕಿಂಗ್ನಲ್ಲಿ ಯೂಕಿ ಭಾಂಬ್ರಿ
ಹೊಸದಿಲ್ಲಿ, ಎ.16: ತೈಪೆ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತದ ಟೆನಿಸ್ ತಾರೆ ಯೂಕಿ ಭಾಂಬ್ರಿ ಅವರು ಮೊದಲ ಬಾರಿ ಟೆನಿಸ್ ರ್ಯಾಂಕಿಂಗ್ನಲ್ಲಿ ಮೊದಲ ಬಾರಿ ಅಗ್ರ 100 ರ್ಯಾಂಕಿಂಗ್ನಲ್ಲಿ ಸ್ಥಾನ ಪಡೆದಿದ್ದಾರೆ.
ಭಾಂಬ್ರಿ 22 ಸ್ಥಾನಗಳಷ್ಟು ಬಡ್ತಿ ಪಡೆದು ಎರಡು ವರ್ಷಗಳ ಬಳಿಕ ಮೊದಲ ಬಾರಿ ನಂ.83 ಸ್ಥಾನ ಪಡೆದಿದ್ದಾರೆ.
ಜುಲೈ 2011ರಲ್ಲಿ ಸೋಮದೇವ್ ದೇವವರ್ಮನ್ ರ್ಯಾಂಕಿಂಗ್ನಲ್ಲಿ ಜೀವನಶ್ರೇಷ್ಠ 62ನೇ ಸ್ಥಾನ ಪಡೆದಿದ್ದರು. ಆ ಬಳಿಕ ಇದೀಗ ಭಾಂಬ್ರಿ ಅಗ್ರ 100ರಲ್ಲಿ ಸ್ಥಾನ ಪಡೆದಿದ್ದಾರೆ.
2015ರಲ್ಲಿ ಯೂಕಿ 100ರಲ್ಲಿ ಸ್ಥಾನ ಪಡೆದಿದ್ದರು. ಆ ಬಳಿಕ ಅವರಿಗೆ ಮೇಲೆ ಏರಲು ಗಾಯದ ಸಮಸ್ಯೆ ಅಡ್ಡಿಯಾಗಿತ್ತು. ಪದೇ ಪದೇ ಗಾಯದ ಸಮಸ್ಯೆ ಅವರನ್ನು ಕಾಡಿತ್ತು. ಈಗಿನ ಪ್ರದರ್ಶನವನ್ನು ಭಾಂಬ್ರಿ ಮುಂದುವರಿಸಿದರೆ ಅವರಿಗೆ ಗ್ರಾಂಡ್ ಸ್ಲಾಮ್ ಮತ್ತು ಎಟಿಪಿ 1000 ಸಿರೀಸ್ ಮಾಸ್ಟರ್ಸ್ ಟೂರ್ನಮೆಂಟ್ಗಳಿಗೆ ನೇರ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ.
ತೈಪೆ ಚಾಲೆಂಜರ್ನಲ್ಲಿ ಯೂಕಿ ವಿರುದ್ಧ ಸೋತು ಎರಡನೇ ಸ್ಥಾನ ಪಡೆದ ರಾಮ್ಕುಮಾರ್ ರಾಮನಾಥನ್ ಅವರು ಜೀವನಶ್ರೇಷ್ಠ 116ನೇ ಸ್ಥಾನ ಪಡೆದಿದ್ದಾರೆ. ಸುಮಿತ್ ನಾಗಲ್ ನಂ.215, ಪ್ರಜ್ಞೇಶ್ ಗುಣೇಶ್ವರನ್ 266ನೇ ಮತ್ತು ಅರ್ಜುನ್ ಖಾಡೆ ನಂ.394ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಡಬಲ್ಸ್ನಲ್ಲಿ ಡಿವಿಜಿ ಶರಣ್ ಜೀವನ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಅವರು ನಂ.41ಕ್ಕೇರಿದ್ದಾರೆ. ಲಿಯಾಂಡರ್ ಪೇಸ್ 49ನೇ ಸ್ಥಾನ . ಭಾರತದ ಆಟಗಾರರಲ್ಲಿ ರೋಹನ್ ಬೋಪಣ್ಣ ನಂ.19, ಅಂಕಿತಾ ರೈನಾ ನಂ.194, ಕರ್ಮನ್ ಕೌರ್ ಥಾಂಡಿ ನಂ.268 ಸ್ಥಾನ ಪಡೆದಿದ್ದಾರೆ.
ಮಹಿಳೆಯರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಝಾ ನಂ.24ಸ್ಥಾನ ಪಡೆದಿದ್ದಾರೆ.