ಭಾರತಕ್ಕೆ ಭೇಟಿ ನೀಡಲಿರುವ ಪಿಸಿಬಿ ನಿಯೋಗ
ಹೊಸದಿಲ್ಲಿ, ಎ.19: ಸುಮಾರು ಎರಡೂವರೆ ವರ್ಷಗಳ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ನಿಯೋಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡಲಿದೆ.
ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ, ಸಿಒಒ ಸುಭಾನ್ ಅಹ್ಮದ್ ಐಸಿಸಿ ಸಭೆಯಲ್ಲಿ ಹಾಜರಾಗಲಿದ್ದಾರೆ. ಐಸಿಸಿ ಸಭೆಯು ಎ.21 ರಂದು ಕೋಲ್ಕತಾದಲ್ಲಿ ನಿಗದಿಯಾಗಿದೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ಸರಣಿ ಪುನರಾರಂಭಿಸುವ ಬಗ್ಗೆ ಬಿಸಿಸಿಐಯೊಂದಿಗೆ ಚರ್ಚಿಸಲು 2015ರಲ್ಲಿ ಮಾಜಿ ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಹಾಗೂ ಸೇಥಿ ಭಾರತಕ್ಕೆ ಭೇಟಿ ನೀಡಿದ್ದರು. ಆ ನಂತರ ಇದೇ ಮೊದಲ ಬಾರಿ ಪಿಸಿಬಿ ನಿಯೋಗ ಭಾರತಕ್ಕೆ ಆಗಮಿಸುತ್ತಿದೆ. ಶಿವಸೇನೆ ಕಾರ್ಯಕರ್ತರು ಬಿಸಿಸಿಐ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರಣ ಬಿಸಿಸಿಐ-ಪಿಸಿಬಿ ಅಧಿಕಾರಿಗಳ ಮಾತುಕತೆ ನಡೆದಿರಲಿಲ್ಲ.
Next Story