ಕೌಂಟಿ ತಂಡದಲ್ಲಿ ಆಡಲಿದ್ದಾರೆ ಕೊಹ್ಲಿ
ಹೊಸದಿಲ್ಲಿ, ಮೇ 3: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ನ ಕೌಂಟಿ ತಂಡ ಸರ್ರೆ ಕ್ರಿಕೆಟ್ನೊಂದಿಗೆ ಸಹಿ ಹಾಕಿದ್ದಾರೆ. ಐಪಿಎಲ್ ಟೂರ್ನಿ ಕೊನೆಗೊಂಡ ಬಳಿಕ ಜೂನ್ನಲ್ಲಿ ಕೌಂಟಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
29ರ ಹರೆಯದ ಕೊಹ್ಲಿ ಈವರ್ಷ ಕೌಂಟಿ ಕ್ರಿಕೆಟ್ ಆಡುತ್ತಿರುವ ಭಾರತದ ನಾಲ್ಕನೇ ಟೆಸ್ಟ್ ಆಟಗಾರನಾಗಿದ್ದಾರೆ. ಚೇತೇಶ್ವರ ಪೂಜಾರ, ಇಶಾಂತ್ ಶರ್ಮ ಹಾಗೂ ವರುಣ್ ಆ್ಯರೊನ್ ಈಗಾಗಲೇ ಕೌಂಟಿ ಕ್ರಿಕೆಟ್ನಲ್ಲಿ ಸಕ್ರಿಯರಾಗಿದ್ದಾರೆ.
Next Story