ಐಪಿಎಲ್ : ರಾಜಸ್ಥಾನ್ ರಾಯಲ್ಸ್ಗೆ ಜಯ
ಮುಂಬೈ, ಮೇ 13: ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಟ್ವೆಂಟಿ-20 ಟೂರ್ನಿಯ 47ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ 7 ವಿಕೆಟ್ಗಳ ಜಯ ಗಳಿಸಿದೆ. ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 169 ರನ್ಗಳ ಸವಾಲನ್ನು ಪಡೆದ ರಾಜಸ್ಥಾನ ರಾಯಲ್ಸ್ ತಂಡ 18 ಓವರ್ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 171 ರನ್ ಗಳಿಸಿತು.
ರಾಜಸ್ಥಾನ ರಾಯಲ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಔಟಾಗದೆ 94ರನ್(53ಎ, 9ಬೌ,5ಸಿ), ನಾಯಕ ಅಜಿಂಕ್ಯ ರಹಾನೆ 37ರನ್, ಸಂಜು ಸ್ಯಾಮ್ಸನ್ 26ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ 168/6: ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 168 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಮುಂಬೈ ತಂಡದ ಪರ ಎವಿನ್ ಲೆವಿಸ್ ಅರ್ಧಶತಕ ದಾಖಲಿಸಿದರು.
ಆರಂಭಿಕ ದಾಂಡಿಗರಾದ ಎವಿನ್ ಲೆವಿಸ್ ಮತ್ತು ಸೂರ್ಯಕುಮಾರ್ ಯಾದವ್ ಮೊದಲ ವಿಕೆಟ್ಗೆ 10.4 ಓವರ್ಗಳಲ್ಲಿ 87 ರನ್ ಸೇರಿಸಿದರು. ನಾಯಕ ರೋಹಿತ್ ಶರ್ಮಾ ಸೊನ್ನೆ ಸುತ್ತಿದರು.ಲೆವಿಸ್ 60 ರನ್ (42ಎ, 4ಬೌ,4ಸಿ) ಮತ್ತು ಸೂರ್ಯಕುಮಾರ್ ಯಾದವ್ 38 ರನ್ ಗಳಿಸಿದರು.
ಹಾರ್ದಿಕ್ ಪಾಂಡ್ಯ 36ರನ್, ಇಶಾನ್ ಕಿಶನ್ 12ರನ್, ಬೆನ್ ಕಟ್ಟಿಂಗ್ 10 ರನ್ ಗಳಿಸಿದರು. ರಾಜಸ್ಥಾನ ರಾಯಲ್ಸ್ ತಂಡದ ಆರ್ಚರ್ ಮತ್ತು ಸ್ಕೋಕ್ಸ್ ತಲಾ 2 ವಿಕೆಟ್, ಧವಳ್ ಕುಲಕರ್ಣಿ ಮತ್ತು ಉನಾದ್ಕಟ್ ತಲಾ 1ವಿಕೆಟ್ ಪಡೆದರು.