ವಿಶ್ವಕಪ್: ಮೆಕ್ಸಿಕೊವನ್ನು ಬಗ್ಗುಬಡಿದ ಬ್ರೆಝಿಲ್ ಕ್ವಾ.ಫೈನಲ್ಗೆ
ನೇಮರ್, ಫಿರ್ಮಿನೊ ತಲಾ ಒಂದು ಗೋಲು
ಸಮರಾ, ಜು.2: ಸ್ಟಾರ್ ಆಟಗಾರ ನೇಮರ್ ಹಾಗೂ ರೊಬರ್ಟೊ ಫಿರ್ಮಿನೊ ಗಳಿಸಿದ ತಲಾ ಒಂದು ಗೋಲು ನೆರವಿನಿಂದ ಐದು ಬಾರಿಯ ಚಾಂಪಿಯನ್ ಬ್ರೆಝಿಲ್ ತಂಡ ಫಿಫಾ ವಿಶ್ವಕಪ್ನಲ್ಲಿ ಮೆಕ್ಸಿಕೊ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್ಗೆ ತಲುಪಿದೆ.
ಸೋಮವಾರ ಸಮರಾ ಅರೆನಾದಲ್ಲಿ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಸೆಣಸಾಟದಲ್ಲಿ ಉಭಯ ತಂಡಗಳು ಮೊದಲಾರ್ಧದಲ್ಲಿ ಗೋಲು ಬಾರಿಸಲು ವಿಫಲವಾದವು.
55ನೇ ನಿಮಿಷದಲ್ಲಿ ಗೋಲು ಬಾರಿಸಿದ ನೇಮರ್ ಬ್ರೆಝಿಲ್ಗೆ 1-0 ಮುನ್ನಡೆ ಒದಗಿಸಿಕೊಟ್ಟರು. 88ನೇ ನಿಮಿಷದಲ್ಲಿ ಗೋಲು ಬಾರಿಸಿದ ಯುವ ಆಟಗಾರ ರೊಬರ್ಟೊ ಫಿರ್ಮಿನೊ ಬ್ರೆಝಿಲ್ 2-0 ಅಂತರದಿಂದ ಜಯ ಸಾಧಿಸಿ ಅಂತಿಮ-8ರ ಘಟ್ಟ ಪ್ರವೇಶಿಸಲು ನೆರವಾದರು.
ಬ್ರೆಝಿಲ್ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟಿರುವ ನೇಮರ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.
Next Story