ಎಟಿಪಿ ರ್ಯಾಂಕಿಂಗ್: ಅಗ್ರ-10ನೇ ಸ್ಥಾನಕ್ಕೆ ಜೊಕೊವಿಕ್ ವಾಪಸ್
ಲಂಡನ್, ಜು.17: ನಾಲ್ಕನೇ ಬಾರಿ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನ್ನು ಗೆದ್ದುಕೊಂಡಿರುವ ನೊವಾಕ್ ಜೊಕೊವಿಕ್ ಸೋಮವಾರ ಬಿಡುಗಡೆಯಾಗಿರುವ ಎಟಿಪಿ ರ್ಯಾಂಕಿಂಗ್ನಲ್ಲಿ ಅಗ್ರ-10ಕ್ಕೆ ವಾಪಸಾಗಿದ್ದಾರೆ.
ರವಿವಾರ ವಿಂಬಲ್ಡನ್ ಫೈನಲ್ನಲ್ಲಿ ದ.ಆಫ್ರಿಕದ ಕೆವಿನ್ ಆ್ಯಂಡರ್ಸನ್ರನ್ನು 6-2, 6-2, 7-6(7/3)ಸೆಟ್ಗಳಿಂದ ಮಣಿಸುವ ಮೂಲಕ ನಾಲ್ಕನೇ ಬಾರಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದರು.
ವಿಂಬಲ್ಡನ್ ಫೈನಲ್ಗೆ ತಲುಪಿದ್ದ ಆ್ಯಂಡರ್ಸನ್ 3 ಸ್ಥಾನ ಭಡ್ತಿ ಪಡೆದು ಐದನೇ ಸ್ಥಾನಕ್ಕೇರಿದ್ದಾರೆ. ಸರ್ಬಿಯದ ಜೊಕೊವಿಕ್ 2017ರ ಅಕ್ಟೋಬರ್ನಲ್ಲಿ ಕೊನೆಯ ಬಾರಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದರು.
ಸ್ಪೇನ್ನ ರಫೆಲ್ ನಡಾಲ್ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಕ್ವಾರ್ಟರ್ ಫೈನಲ್ನಲ್ಲಿ ಆ್ಯಂಡರ್ಸನ್ಗೆ ಸೋತಿದ್ದ ವಿಶ್ವದ ನಂ.2ನೇ ಆಟಗಾರ ರೋಜರ್ ಫೆಡರರ್ಗಿಂತ ಹೆಚ್ಚು ಅಂತರ ಕಾಯ್ದುಕೊಂಡಿ ದ್ದಾರೆ.
Next Story