ಶರಪೋವಾಗೆ ಸುಲಭ ಜಯ
ಮಾಂಟ್ರಿಯಲ್, ಆ.9: ಮಳೆಬಾಧಿತ ಮಾಂಟ್ರಿಯಲ್ ಡಬ್ಲುಟಿಎ ಇವೆಂಟ್ನಲ್ಲಿ ರಶ್ಯದ ಮಾಜಿ ನಂ.1 ಆಟಗಾರ್ತಿ ಮರಿಯಾ ಶರಪೋವಾ ಸುಲಭ ಜಯ ಗಳಿಸಿದ್ದಾರೆ.
ಮರಿಯಾ ಅವರು ರಶ್ಯದ ಡಾರಿಯ ಕಸಟ್ಕಿನಾ ವಿರುದ್ಧ 6-0, 6-2 ಅಂತರದಲ್ಲಿ ಜಯ ಗಳಿಸಿದರು. ವಿಂಬಲ್ಡನ್ನಲ್ಲಿ ಸೋಲು ಅನುಭವಿಸಿದ ಬಳಿಕ ಮರಿಯಾ ಶರಪೋವಾ ಅವರು ಮೊದಲ ಬಾರಿ ಜಯ ದಾಖಲಿಸಿದ್ದಾರೆ.
12ನೇ ಶ್ರೇಯಾಂಕದ ಕಸಟ್ಕಿನಾ ವಿರುದ್ಧ ಕೇವಲ 66 ನಿಮಿಷಗಳ ಹಣಾಹಣಿಯಲ್ಲಿ ಶರಪೋವಾ ಜಯ ದಾಖಲಿಸಿದರು.
Next Story