ಮೂರು ಪದಕ ದೃಢಪಡಿಸಿದ ಸ್ಕ್ವಾಷ್ ಆಟಗಾರರು
ಜಕಾರ್ತ, ಆ.24: ಏಶ್ಯನ್ ಗೇಮ್ಸ್ನಲ್ಲಿ ಭಾರತ ಸ್ಕ್ವಾಷ್ ಸ್ಪರ್ಧೆಯಲ್ಲಿ ಮೂರು ಪದಕಗಳನ್ನು ದೃಢಪಡಿಸಿದೆ. ಸೌರವ್ ಘೋಷಾಲ್, ಜೋಶ್ನಾ ಚಿನ್ನಪ್ಪ ಹಾಗೂ ದೀಪಿಕಾ ಪಲ್ಲಿಕಲ್ ಸಿಂಗಲ್ಸ್ ಸ್ಪರ್ಧೆಗಳಲ್ಲಿ ಸೆಮಿ ಫೈನಲ್ಗೆ ತಲುಪುವ ಮೂಲಕ ಪದಕ ಖಚಿತಪಡಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಅಗ್ರ ಶ್ರೇಯಾಂಕದ ಸೌರವ್ ಸಹ ಆಟಗಾರ ಹರಿಂದರ್ ಪಾಲ್ ಸಂಧು ಅವರನ್ನು 3-1(9-11,11-7, 11-7, 11-7) ಅಂತರದಿಂದ ಮಣಿಸಿದರು. ಮಹಿಳೆಯರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ನಲ್ಲಿ ದೀಪಿಕಾ ಜಪಾನ್ನ ಕೊಬಯಶಿ ಮಿಸಾಕಿ ಅವರನ್ನು 3-0(11-5, 11-6, 118) ಅಂತರದಿಂದ ಸುಲಭವಾಗಿ ಸೋಲಿಸಿದರು. ಜೋಶ್ನಾ ಮತ್ತೊಂದು ಸಿಂಗಲ್ಸ್ನಲ್ಲಿ ಹಾಂಕಾಂಗ್ನ ಚಾನ್ ಹೊ ಲಿಂಗ್ರನ್ನು 3-1(11-5,12-10, 5-11, 12-10)ಅಂತರದಿಂದ ಸೋಲಿಸಿದ್ದಾರೆ. ಏಶ್ಯನ್ ಗೇಮ್ಸ್ನಲ್ಲಿ ಚೊಚ್ಚಲ ಪದಕ ಖಚಿತಪಡಿಸಿದ್ದಾರೆ. ಭಾರತ ಏಶ್ಯನ್ ಗೇಮ್ಸ್ನಲ್ಲಿ ಸ್ಕ್ವಾಷ್ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಬಾರಿ ಉತ್ತಮ ಪ್ರದರ್ಶನ ನೀಡಿದೆ. 2014ರ ಗೇಮ್ಸ್ನಲ್ಲಿ ಭಾರತ ಎರಡು ಪದಕ ಜಯಿಸಿತ್ತು. ಸೌರವ್ ಬೆಳ್ಳಿ ಪದಕ ಜಯಿಸಿದ್ದರೆ, ದೀಪಿಕಾ ಕಂಚಿನ ಪದಕ ಜಯಿಸಿದ್ದರು.