ಮಹಿಳೆಯರ 4x400 ರಿಲೇಯಲ್ಲಿ ಪೂವಮ್ಮ ತಂಡಕ್ಕೆ ಚಿನ್ನ
ಜಕಾರ್ತ, ಆ.30: ಏಶ್ಯನ್ ಗೇಮ್ಸ್ ನ ಮಹಿಳೆಯರ 4x400 ರಿಲೇಯಲ್ಲಿ ಭಾರತದ ಎಂ.ಆರ್.ಪೂವಮ್ಮ ತಂಡ ಚಿನ್ನ ಗೆದ್ದುಕೊಂಡಿದೆ.
ಎಂಆರ್ ಪೂವಮ್ಮ, ಹಿಮಾ ದಾಸ್ , ಸರಿತಾ ಬೆನ್ ಗಾಯಕವಾಡ್ , ವಿಸ್ಮಯ ಕೊರೊತ್ ನೇತೃತ್ವದ ತಂಡ 4x400 ರಿಲೇಯ ಫೈನಲ್ ನಲ್ಲಿ 3 ನಿಮಿಷ 28.72 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಚಿನ್ನ ಪಡೆದಿದೆ. ಬಹರೈನ್ (3:30.61 ) ಬೆಳ್ಳಿ ಮತ್ತು ವಿಯೆಟ್ನಾಂ (3:33.23) ಕಂಚು ಪಡೆಯಿತು.
ಏಶ್ಯನ್ ಗೇಮ್ಸ್ ನಲ್ಲಿ ಹಾಲಿ ಚಾಂಪಿಯನ್ ಭಾರತದ ಮಹಿಳೆಯರ ರಿಲೇ ತಂಡ ಸತತ ಐದನೇ ಬಾರಿ ಚಿನ್ನ ಗೆದ್ದುಕೊಂಡಿದೆ.
Next Story