ಏಶ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ: ಭಾರತ-ಮಲೇಶ್ಯಾ ಪಂದ್ಯ ಗೋಲುರಹಿತ ಡ್ರಾ
ಹೊಸದಿಲ್ಲಿ, ಅ.24: ಮಸ್ಕತ್ನಲ್ಲಿ ಸೋಮವಾರ ಪುರುಷರ ಏಶ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ಮಲೇಶ್ಯಾ ನಡುವೆ ನಡೆದ ಲೀಗ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.
ತನ್ನ ತಪ್ಪಿನಿಂದಾಗಿ ಹಲವು ಬಾರಿ ಗೋಲು ಬಾರಿಸುವ ಅವಕಾಶ ವಂಚಿತವಾದ ಭಾರತ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.
ಈ ಫಲಿತಾಂಶದ ಬಳಿಕವೂ ಭಾರತ ಲೀಗ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಭಾರತ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿರುವ ಮಲೇಶ್ಯಾ ಎರಡನೇ ಸ್ಥಾನದಲ್ಲಿದೆ. ಉಭಯ ತಂಡಗಳು 4 ಪಂದ್ಯಗಳ ಪೈಕಿ 3ರಲ್ಲಿ ಜಯ ಹಾಗೂ ಒಂದರಲ್ಲಿ ಡ್ರಾ ಸಾಧಿಸಿ ತಲಾ 10 ಅಂಕ ಗಳಿಸಿವೆ. ಈಗಾಗಲೇ ಸೆಮಿ ಫೈನಲ್ ಸ್ಥಾನವನ್ನು ದೃಢಪಡಿಸಿವೆ.
ಭಾರತ ಏಶ್ಯನ್ ಗೇಮ್ಸ್ನ ಸೆಮಿ ಫೈನಲ್ನಲ್ಲಿ ಮಲೇಶ್ಯಾಕ್ಕೆ ಸೋಲುಂಡಿತ್ತು. ಆ ಸೋಲಿನ ನೋವಿನಿಂದ ಹೊರಬರಲು ಯತ್ನಿಸಿದರೂ ಅದರಲ್ಲಿ ಯಶಸ್ಸು ಕಂಡಿಲ್ಲ.
Next Story