ಗುಜರಾತ್-ಬೆಂಗಳೂರು ಪಂದ್ಯ ಡ್ರಾ
ಪ್ರೊ ಕಬಡ್ಡಿ ಲೀಗ್
ಅಹ್ಮದಾಬಾದ್, ನ.17: ಆತಿಥೇಯ ಗುಜರಾತ್ ಫಾರ್ಚೂನ್ ಜೈಂಟ್ಸ್ ಹಾಗೂ ಬೆಂಗಳೂರು ಬುಲ್ಸ್ ನಡುವೆ ಶನಿವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯ 30-30 ಅಂತರದಿಂದ ಡ್ರಾಗೊಂಡಿದೆ. ಗುಜರಾತ್ ಪರ ಸಚಿನ್ 11 ಅಂಕ ಗಳಿಸಿದರೆ, ಬೆಂಗಳೂರು ಪರ ಪವನ್ಕುಮಾರ್ 10 ಅಂಕ ಗಳಿಸಿದ್ದರು. ಮತ್ತೊಂದು ಪಂದ್ಯದಲ್ಲಿ ಬಂಗಾಳ ವಾರಿಯರ್ಸ್ ತಂಡ ಪುಣೇರಿ ಪಲ್ಟನ್ ತಂಡವನ್ನು 26-22 ಅಂತರದಿಂದ ರೋಚಕವಾಗಿ ಸೋಲಿಸಿತು. ಬಂಗಾಳದ ಪರ ಮಣಿಂದರ್ ಸಿಂಗ್(6 ಅಂಕ)ಹಾಗೂ ಪುಣೇರಿ ಪರ ಮೋರೆ(9)ಗರಿಷ್ಠ ಅಂಕ ಗಳಿಸಿದರು.
Next Story