ಎರಡನೇ ಟೆಸ್ಟ್: ಪಾಕ್ 418/5
ಸೊಹೈಲ್,ಆಝಮ್ ಶತಕ
ದುಬೈ, ನ.25: ಹ್ಯಾರಿಸ್ ಸೊಹೈಲ್ ಹಾಗೂ ಬಾಬರ್ ಆಝಮ್ ಅವರ ಆಕರ್ಷಕ ಶತಕದ ನೆರವಿನಿಂದ ಪಾಕಿಸ್ತಾನ ತಂಡ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ಗಳ ನಷ್ಟಕ್ಕೆ 418 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ. 2ನೇ ದಿನವಾದ ರವಿವಾರ 4 ವಿಕೆಟ್ಗಳ ನಷ್ಟಕ್ಕೆ 207 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಪಾಕ್ಗೆ ಸೊಹೈಲ್ ಹಾಗೂ ಆಝಮ್ ಆಧಾರವಾದರು. ಒಂಬತ್ತೂವರೆ ಗಂಟೆ ಕಾಲ ಬ್ಯಾಟಿಂಗ್ ಮಾಡಿದ ಸೊಹೈಲ್ 421 ಎಸೆತಗಳಲ್ಲಿ 147 ರನ್ ಗಳಿಸಿದರು. ಆಝಮ್ ಚೊಚ್ಚಲ ಶತಕ(ಔಟಾಗದೆ 127)ಗಳಿಸಿದರು. ಈ ಜೋಡಿ 5ನೇ ವಿಕೆಟ್ಗೆ 186 ರನ್ ಜೊತೆಯಾಟ ನಡೆಸಿತು. ಬೌಲ್ಟ್ ಈ ಜೋಡಿಯನ್ನು ಬೇರ್ಪಡಿಸಿದರು.
Next Story