ಮಹಿಳಾ ಟ್ವೆಂಟಿ-20 ಪಂದ್ಯ ಸೇರ್ಪಡೆಗೆ ಐಸಿಸಿ ಬಿಡ್
ಕಾಮನ್ವೆಲ್ತ್ ಗೇಮ್ಸ್
ದುಬೈ, ನ.26: ಬರ್ಮಿಂಗ್ಹ್ಯಾಮ್ನಲ್ಲಿ 2022ರಲ್ಲಿ ನಡೆಯುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳಾ ಟ್ವೆಂಟಿ-20 ಪಂದ್ಯವನ್ನು ಸೇರ್ಪಡೆಗೊಳಿಸಲು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಬಿಡ್ ಸಲ್ಲಿಸಿದೆ ಎಂದು ಸೋಮವಾರ ಪ್ರಕಟನೆ ತಿಳಿಸಿದೆ.
1998ರಲ್ಲಿ ಕೌಲಾಲಂಪುರದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮೊದಲ ಬಾರಿ ಪುರುಷರ ಕ್ರಿಕೆಟ್ ತಂಡ ಭಾಗವಹಿಸಿದ್ದು ದಕ್ಷಿಣ ಆಫ್ರಿಕ ತಂಡ ಚಿನ್ನ ಜಯಿಸಿತ್ತು. ಆ ಬಳಿಕ ಕಾಮನ್ವೆಲ್ತ್ನಲ್ಲಿ ಕ್ರಿಕೆಟ್ ಕಾಣಿಸಿಕೊಂಡಿಲ್ಲ.
ಕ್ರಿಕೆಟ್ ಆಸ್ಟ್ರೇಲಿಯ ಐಸಿಸಿಗೆ ಬೆಂಬಲ ವ್ಯಕ್ತಪಡಿಸಿದ್ದು, ಎರಡು ದಿನಗಳ ಹಿಂದೆ ವೆಸ್ಟ್ಇಂಡೀಸ್ನಲ್ಲಿ ಕೊನೆಗೊಂಡ ಮಹಿಳಾ ಟ್ವೆಂಟಿ-20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯ ಮಹಿಳಾ ತಂಡ ನಾಲ್ಕನೇ ಬಾರಿ ವಿಶ್ವಕಪ್ನ್ನು ಜಯಿಸಿ ದಾಖಲೆ ನಿರ್ಮಿಸಿತ್ತು.
Next Story