ಗುಜರಾತ್ ಫೋರ್ಚುನ್, ಬೆಂಗಳೂರಿಗೆ ಗೆಲುವು
ಪ್ರೊ ಕಬಡ್ಡಿ
ವಿಶಾಖಪಟ್ಟಣ, ಡಿ.12: ಪ್ರೊ ಕಬಡ್ಡಿ ಲೀಗ್ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗುಜರಾತ್ ಫೋರ್ಚುನ್ ಜೈಂಟ್ಸ್ ಹಾಗೂ ಬೆಂಗಳೂರು ಬುಲ್ಸ್ ತಂಡಗಳು ಪ್ರೊ ಕಬಡ್ಡಿ ಲೀಗ್ನಲ್ಲಿ ಜಯ ದಾಖಲಿಸಿವೆ.
ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ಗುಜರಾತ್ ತಂಡ ಹರ್ಯಾಣ ಸ್ಟೀಲರ್ಸ್ ತಂಡವನ್ನು 47-37 ಅಂತರದಿಂದ ಸೋಲಿಸಿ ಶಾಕ್ ನೀಡಿತು. ಗುಜರಾತ್ನ ಪರ ಪ್ರಪಂಜನ್ 12 ಅಂಕ ಹಾಗೂ ಸಚಿನ್ 10 ಅಂಕ ಗಳಿಸಿ ಗೆಲುವಿಗೆ ನೆರವಾದರು. ಹರ್ಯಾಣದ ಪರ ಮೋನು ಗೊಯತ್ 11 ಹಾಗೂ ನವೀನ್ 7 ಅಂಕ ಗಳಿಸಿದ್ದಾರೆ.
ಇದೇ ವೇಳೆ, ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ತಂಡ ಆತಿಥೇಯ ತೆಲುಗು ಟೈಟಾನ್ಸ್ ತಂಡವನ್ನು 37-24 ಅಂತರದಿಂದ ಮಣಿಸಿತು. ಪವನ್ ಕುಮಾರ್(13 ಅಂಕ) ಹಾಗೂ ಮಹೇಂದರ್ ಸಿಂಗ್(05)ಬೆಂಗಳೂರು ಗೆಲುವಿಗೆ ನೆರವಾದರು. ಟೈಟಾನ್ಸ್ ಪರವಾಗಿ ನೀಲೇಶ್ ಸಾಳುಂಕೆ(6)ಗರಿಷ್ಠ ಅಂಕ ಗಳಿಸಿದರು.
Next Story