ಬಾರ್ಸಿಲೋನ ಗೆಲುವು
ಮೆಸ್ಸಿ ಹ್ಯಾಟ್ರಿಕ್
ವೆಲೆನ್ಸಿಯಾ(ಸ್ಪೇನ್), ಡಿ.17: ಈ ಋತುವಿನ ಲಾ ಲಿಗಾ ಫುಟ್ಬಾಲ್ ಟೂರ್ನಿಯಲ್ಲಿ ಮೊದಲ ಹ್ಯಾಟ್ರಿಕ್ ಗೋಲು ಬಾರಿಸಿದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಹಾಗೂ ತಂಡದ ಇನ್ನಿಬ್ಬರು ತಾರಾ ಆಟಗಾರರು ಗಳಿಸಿದ 2 ಗೋಲುಗಳ ನೆರವಿನಿಂದ ರವಿವಾರ ಬಾರ್ಸಿಲೋನ ತಂಡ ಲೆವಾಂಟೆ ತಂಡದ ವಿರುದ್ಧ 5-0 ಅಂತರದ ಗೆಲುವು ಸಾಧಿಸಿತು. ಆ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದೆ.
ಬಾರ್ಸಿಲೋನ ಪರ ಮೆಸ್ಸಿ(43, 47, 60ನೇ ನಿಮಿಷ), ಲೂಯಿಸ್ ಸುಯರೆಝ್(35ನೇ ನಿಮಿಷ) ಹಾಗೂ ಗೆರಾಲ್ಡ್ ಪಿಕ್ (88ನೇ ನಿಮಿಷ) ಗೋಲು ಬಾರಿಸಿದರು.
ಈವರೆಗೆ ನಡೆದ ಎಲ್ಲ ಲಾಲಿಗಾ ಟೂರ್ನಿಗಳಲ್ಲಿ ಸೇರಿ ಒಟ್ಟು 31ನೇ ಹ್ಯಾಟ್ರಿಕ್ನ್ನು ಮೆಸ್ಸಿ ಸಂಪಾದಿಸಿದರು. ‘‘ಸುಯರೆಝ್ ಹಾಗೂ ಮೆಸ್ಸಿ ಜಗತ್ತಿನ ಅತ್ಯುತ್ತಮ ಆಟಗಾರರ ಜೋಡಿಯಾಗಿದೆ. ಲೂಯಿಸ್ ತನ್ನ ದೇಹದಲ್ಲೇ ಗೋಲುಗಳನ್ನು ಹೊಂದಿದ್ದಾರೆ ಮತ್ತು ಲಿಯೊ(ಮೆಸ್ಸಿ) ಬಗ್ಗೆ ಎಲ್ಲ ಗೊತ್ತಿದ್ದದ್ದೇ’’ ಎಂದು ಬಾರ್ಸಿಲೋನಾ ರಕ್ಷಣಾ ಆಟಗಾರ ಗೆರಾಲ್ಡ್ ಪಿಕ್ ಹೇಳಿದ್ದಾರೆ.
Next Story