ಆಸ್ಪತ್ರೆಯಿಂದ ಬಿಡುಗಡೆಯಾದ ಹಾಕಿ ದಂತಕತೆ ಬಲ್ಬೀರ್ ಸಿಂಗ್
ಚಂಡಿಗಡ, ಜ.19: ಅನಾರೋಗ್ಯ ಹಿನ್ನೆಲೆಯಲ್ಲಿ 108 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಹಾಕಿ ದಂತಕತೆ ಬಲ್ಬೀರ್ ಸಿಂಗ್ ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಇದೊಂದು ಸರಿಸಾಟಿಯಿಲ್ಲದ ಸಾಧನೆ. 95ನೇ ವಯಸ್ಸಿನಲ್ಲೂ ಅವರ ಆರೋಗ್ಯದಲ್ಲಿ ಚೇತರಿಕೆಯಾಗುತ್ತಿದೆ. ಅವರ ಸಂಪೂರ್ಣ ಚೇತರಿಕೆಗೆ ನಾಲ್ಕಾರು ತಿಂಗಳು ಬೇಕು. ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಪಿಜಿಐ ಆಸ್ಪತ್ರೆ ತಿಳಿಸಿದೆ.
ಭಾರತ ಹಾಕಿ ತಂಡದ ಪರ ಮೂರು ಬಾರಿ ಒಲಿಂಪಿಕ್ಸ್ ಪದಕ ಜಯಿಸಿರುವ ಸಿಂಗ್ ಅಕ್ಟೋಬರ್ 2ರಂದು ಉಸಿರಾಟದ ಸಮಸ್ಯೆಯಿಂದಾಗಿ ಪಿಜಿಐಗೆ ದಾಖಲಾಗಿದ್ದರು.
Next Story