ಭಾರತದ ಈ ಆಲ್ ರೌಂಡರ್ ಆಟಗಾರನಿಗೆ ಬೌಲಿಂಗ್ ನಿಷೇಧಿಸಿದ ಐಸಿಸಿ
ಹೊಸದಿಲ್ಲಿ, ಜ,28: ಭಾರತದ ಬೌಲರ್ ಅಂಬಟಿ ರಾಯುಡು ಅವರಿಗೆ ಸಂಶಯಾಸ್ಪದ ಬೌಲಿಂಗ್ ಶೈಲಿಯ ಹಿನ್ನೆಲೆಯಲ್ಲಿ ಐಸಿಸಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬೌಲಿಂಗ್ ನಡೆಸುವುದರಿಂದ ಅಮಾನತುಗೊಳಿಸಿದೆ.
ಆಸ್ಟ್ರೇಲಿಯ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ರಾಯುಡು ಬೌಲಿಂಗ್ ಶೈಲಿಯ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಈ ಕಾರಣದಿಂದಾಗಿ ಅವರ ಬೌಲಿಂಗ್ ಶೈಲಿ ಕಾನೂನುಬದ್ಧವೆಂದು ಸಾಬೀತುಪಡಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ಅಷ್ಟರ ತನಕ ಅವರಿಗೆ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬೌಲಿಂಗ್ ನಡೆಸಲು ಅವಕಾಶ ಇಲ್ಲದಾಗಿದೆ. ಆದರೆ ಬೌಲಿಂಗ್ ಶೈಲಿ ಪರೀಕ್ಷೆ ಗೆ ಹಾಜರಾಗದಿರಲು ರಾಯುಡು ನಿರ್ಧರಿಸಿರುವ ಕಾರಣ ಅಮಾನತು ತಕ್ಷಣದಿಂದಲೇ ಜಾರಿಗೆ ಬಂದಿದೆ.
ದೇಶಿಯ ಕ್ರಿಕೆಟ್ ನಲ್ಲಿ ಬೌಲಿಂಗ್ ನಡೆಸಲು ರಾಯುಡುಗೆ ಯಾವುದೇ ನಿರ್ಬಂಧ ಇಲ್ಲ.
Next Story