ವಿಶ್ವಕಪ್ಗೆ 18 ಆಟಗಾರರ ಕಿರು ಪಟ್ಟಿ ಸಿದ್ಧ: ಪ್ರಸಾದ್
ಮುಂಬೈ, ಫೆ.15: ಮುಂಬರುವ ಏಕದಿನ ವಿಶ್ವಕಪ್ಗೆ 18 ಕ್ರಿಕೆಟಿಗರ ಕಿರು ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದೆ. ಇಂಗ್ಲೆಂಡ್ನಲ್ಲಿ ನಡೆಯುವ ಮೆಗಾ ಸ್ಪರ್ಧೆಗೆ ಮೊದಲು ಆಟಗಾರರ ಕೆಲಸ ಒತ್ತಡವನ್ನು ನಿಭಾಯಿಸುವ ಕುರಿತಂತೆ ಆಟಗಾರರಿಗೆ ಸಂಬಂಧಿಸಿದ ಐಪಿಎಲ್ ಫ್ರಾಂಚೈಸಿಯೊಂದಿಗೆ ಬಿಸಿಸಿಐ ಮಾತುಕತೆ ನಡೆಸಲಿದೆ ಎಂದು ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಶುಕ್ರವಾರ ತಿಳಿಸಿದ್ದಾರೆ.
ಮಾ.23ರಂದು ಆರಂಭವಾಗಲಿರುವ ಐಪಿಎಲ್ ವೇಳೆ ಆಟಗಾರರ ಒತ್ತಡದ ಬಗ್ಗೆ ನಿಗಾವಹಿಸಲಾಗುವುದು. ಮೇ 30ರಿಂದ ಜು.14ರ ತನಕ ನಡೆಯುವ ವಿಶ್ವಕಪ್ನಲ್ಲಿ ಆಟಗಾರರು ಸಮಸ್ಯೆ ಮುಕ್ತವಾಗಿರುವಂತೆ ನೋಡಿಕೊಳ್ಳಲಾಗುವುದು. 18 ಆಟಗಾರರನ್ನು ಅಂತಿಮ ತಂಡಕ್ಕೆ ಆಯ್ಕೆ ಮಾಡುವ ಮೊದಲು ನಾವು ಆಟಗರರನ್ನು ರೊಟೇಟ್ ಮಾಡಲಿದ್ದೇವೆ ಎಂದರು.
Next Story