ವಿಶ್ವಕಪ್ ಬಳಿಕ ಮೊದಲ ಬಾರಿ ಪೋರ್ಚುಗಲ್ ತಂಡಕ್ಕೆ ರೊನಾಲ್ಡೊ
ಲಿಸ್ಬನ್, ಮಾ.15: ಕಳೆದ ವರ್ಷ ನಡೆದ ವಿಶ್ವಕಪ್ ಫುಟ್ಬಾಲ್ ಬಳಿಕ ಮೊದಲ ಬಾರಿ ಪೋರ್ಚುಗಲ್ ರಾಷ್ಟ್ರೀಯ ತಂಡದಲ್ಲಿ ಆ ದೇಶದ ಖ್ಯಾತ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸ್ಥಾನ ಪಡೆದಿದ್ದಾರೆ.
ಸೆಪ್ಟಂಬರ್ ಹಾಗೂ ನವೆಂಬರ್ ತಿಂಗಳ ಮಧ್ಯೆ ಪೋಲೆಂಡ್ ಹಾಗೂ ಇಟಲಿ ತಂಡಗಳ ವಿರುದ್ಧ ನಡೆದಿದ್ದ ನೇಶನ್ಸ್ ಲೀಗ್ ಟೂರ್ನಿಗೆ ರೊನಾಲ್ಡೊರನ್ನು ಆಯ್ಕೆ ಮಾಡಿರಲಿಲ್ಲ. ಉಕ್ರೇನ್ ಹಾಗೂ ಸರ್ಬಿಯಾ ವಿರುದ್ಧ ನಡೆಯಲಿರುವ 2020ರ ಯುರೋ ಕಪ್ ಅರ್ಹತಾ ಟೂರ್ನಿಗೆ ಕೋಚ್ ಫೆರ್ನಾಂಡೊ ನೇತೃತ್ವದ ತಂಡಕ್ಕೆ ರೊನಾಲ್ಡೊ ಸೇರ್ಪಡೆಯಾಗಿದ್ದಾರೆ.
Next Story