ವಿಶ್ವಕಪ್ ಗೆ ಪಾಕ್ ತಂಡ
ಯುವ ಆಟಗಾರ ಹಸನೈನ್ ಗೆ ಸ್ಥಾನ
ಇಸ್ಲಾಮಾಬಾದ್, ಎ.18: ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ಗೆ ತನ್ನ 15 ಸದಸ್ಯರ ತಂಡವನ್ನು ಗುರುವಾರ ಪ್ರಕಟಿಸಿದೆ. ಅನುಭವಿ ವೇಗಿ ಹಾಗೂ ಫಾರ್ಮ್ ಕಳೆದುಕೊಂಡಿರುವ ಮುಹಮ್ಮದ್ ಆಮಿರ್ ಅವರನ್ನು ಕೈಬಿಡಲಾಗಿದ್ದು, ಯುವ ವೇಗಿ ಮುಹಮ್ಮದ್ ಹಸನೈನ್ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಪಾಕ್ ತಂಡವನ್ನು ಪ್ರಕಟಿಸಿ ಮಾತನಾಡಿರುವ ಆಯ್ಕೆ ಸಮಿತಿಯ ಮುಖ್ಯಸ್ಥ ಇಂಝಮಾಮ್-ವುಲ್ ಹಕ್, ‘‘ಆಮಿರ್ ಅವರನ್ನು ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ ಆದರೆ ಟೂರ್ನಿಗಿಂತ ಮೊದಲು ನಡೆಯುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸೇರಿಸಿಕೊಳ್ಳಲಾಗಿದೆ’’ಎಂದಿದ್ದಾರೆ.
ಬೆರಳಿನ ಗಾಯದಿಂದ ಚೇತರಿಸಿಕೊಂಡಿರುವ ಹಿರಿಯ ದಾಂಡಿಗ ಮುಹಮ್ಮದ್ ಹಫೀಝ್ ಅವರೂ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ‘‘ಸದ್ಯಕ್ಕೆ ಹಫೀಝ್ಗೆ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡದಿರುವಂತೆ ವೈದ್ಯರು ಸಲಹೆ ನೀಡಿದ್ದು, ಎರಡು ವಾರಗಳಲ್ಲಿ ಪುನಶ್ಚೇತನಗೊಂಡ ಬಳಿಕ ಅವರು ಅಂಗಣಕ್ಕಿಳಿಯಬಹುದು ಎಂದು ಹೇಳಿದ್ದಾರೆ’’ ಎಂದು ಇಂಝಮಾಮ್ ತಿಳಿಸಿದರು.
►ಪಾಕಿಸ್ತಾನ ತಂಡ
ಸರ್ಫರಾಝ್ ಅಹ್ಮದ್ (ನಾಯಕ), ಫಖರ್ ಝಮಾನ್, ಇಮಾಮ್ವುಲ್ ಹಕ್, ಬಾಬರ್ ಅಝಮ್, ಶಾದಾಬ್ ಖಾನ್, ಶುಐಬ್ ಮಲಿಕ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಹಸನ್ ಅಲಿ, ಅಬಿದ್ ಅಲಿ, ಮುಹಮ್ಮದ್ ಹಫೀಝ್, ಇಮಾದ್ ವಾಸೀಂ, ಜುನೈದ್ ಖಾನ್, ಮುಹಮ್ಮದ್ ಹಸನೈನ್ ಹಾಗೂ ಹಾರಿಸ್ ಸೊಹೈಲ್.