ಐಪಿಎಲ್: ಕಿಂಗ್ಸ್ ಇಲೆವೆನ್ ಪಂಜಾಬ್ಗೆ ಜಯ
ಮೊಹಾಲಿ, ಮೇ 5: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್ಗಳ ಜಯ ಗಳಿಸಿದೆ.
ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 171 ರನ್ ಗಳಿಸಬೇಕಿದ್ದ ಪಂಜಾಬ್ ತಂಡ ಇನ್ನೂ 12 ಎಸೆತಗಳನ್ನು ಬಾಕಿ ಉಳಿಸಿ 4 ವಿಕೆಟ್ ನಷ್ಟದಲ್ಲಿ 173 ರನ್ ಗಳಿಸಿ ಗೆಲುವಿನ ದಡ ಸೇರಿತು.
ಲೋಕೇಶ್ ರಾಹುಲ್ 71 ರನ್(36ಎ, 7ಬೌ, 5ಸಿ), ಕ್ರಿಸ್ ಗೇಲ್ 28 ರನ್, ನಿಕೋಲಾಸ್ಪೂರನ್ 36 ರನ್, ಮಾಯಂಕ್ ಅಗರ್ವಾಲಾ 7 ರನ್, ಮನ್ದೀಪ್ ಸಿಂಗ್ ಔಟಾಗದೆ 11 ರನ್, ಸ್ಯಾಮ್ ಕರ್ರನ್ ಔಟಾಗದೆ 6ರನ್ ಗಳಿಸಿ ಗೆಲುವಿಗೆ ನೆರವಾದರು.ಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 170 ರನ್ ಗಳಿಸಿತ್ತು.ಎಫ್ ಡು ಪ್ಲೆಸಿಸ್ 96 ರನ್(55ಎ, 10ಬೌ,4ಸಿ) , ಸುರೇಶ್ ರೈನಾ 53ರನ್(38ಎ, 5ಬೌ,2ಸಿ) ಮತ್ತು ಎಂಎಸ್ ಧೋನಿ ಔಟಾಗದೆ 10 ರನ್ ಗಳಿಸಿದರು.