ಟೂರ್ನಿಯಿಂದ ಹೊರಗುಳಿದ ನಿಕ್ ಕಿರ್ಗಿಯೊಸ್
ಪ್ಯಾರಿಸ್, ಮೇ 24: ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ ರವಿವಾರದಿಂದ ಆರಂಭವಾಗಲಿರುವ ವರ್ಷದ ಎರಡನೇ ಗ್ರಾನ್ಸ್ಲಾಮ್ ಟೂರ್ನಿ ಫ್ರೆಂಚ್ ಓಪನ್ನಿಂದ ಹೊರಗುಳಿದಿದ್ದಾರೆ.
24ರ ಹರೆಯದ ಕಿರ್ಗಿಯೊಸ್ ಮೊದಲ ಸುತ್ತಿನಲ್ಲಿ ಬ್ರಿಟನ್ನ ಕ್ಯಾಮರೂನ್ ನೊರ್ರಿ ಅವರನ್ನು ಎದುರಿಸಬೇಕಾಗಿತ್ತು. ಕಳೆದ ವಾರ ರೋಮ್ನಲ್ಲಿ ಇಟಾಲಿಯನ್ ಓಪನ್ನಿಂದ ಅನರ್ಹಗೊಂಡಿದ್ದ ಕಿರ್ಗಿಯೊಸ್ ವಿಂಬಲ್ಡನ್ನಲ್ಲಿ ಅಭ್ಯಾಸ ನಡೆಸಲು ಆ್ಯಂಡಿ ಮರ್ರೆ ಜೊತೆ ಲಂಡನ್ಗೆ ತೆರಳಿದ್ದರು.
ಪ್ಯಾರಿಸ್ನಲ್ಲಿ ಎರಡು ವಾರಕ್ಕಿಂತ ಹೆಚ್ಚು ಸಮಯ ಕಳೆಯದ ಕಿರ್ಗಿಯೊಸ್ ಕಳೆದ ವರ್ಷ ಕೂಡ ಫ್ರೆಂಚ್ ಓಪನ್ನಿಂದ ಹಿಂದೆ ಸರಿದಿದ್ದರು.
Next Story