ಫೆಡರರ್ 12ನೇ ಬಾರಿ ಕ್ವಾರ್ಟರ್ ಫೈನಲ್ಗೆ
ಪ್ಯಾರಿಸ್,ಜೂ.2: ಸ್ವಿಸ್ ಸೂಪರ್ಸ್ಟಾರ್ ರೋಜರ್ ಫೆಡರರ್ ಫ್ರೆಂಚ್ ಓಪನ್ನಲ್ಲಿ ರವಿವಾರ 12ನೇ ಬಾರಿ ಕ್ವಾರ್ಟರ್ ಫೈನಲ್ಗೆ ತಲುಪಿದರು. 28 ವರ್ಷಗಳ ಬಳಿಕ ಗ್ರಾನ್ಸ್ಲಾಮ್ ಟೂರ್ನಿಯಲ್ಲಿ ಅಂತಿಮ-8ರ ಘಟ್ಟ ತಲುಪಿದ ಹಿರಿಯ ಆಟಗಾರ ಎನಿಸಿಕೊಂಡರು.
37ರ ಹರೆಯದ ಫೆಡರರ್ ಅರ್ಜೆಂಟೀನದ ಲಿಯೊನಾರ್ಡೊ ಮಯೆರ್ರನ್ನು 6-2,6-3, 6-3 ಸೆಟ್ಗಳ ಅಂತರದಿಂದ ಮಣಿಸಿದರು.
ಫೆಡರರ್ ಮುಂದಿನ ಸುತ್ತಿನಲ್ಲಿ ಸ್ವಿಸ್ನ ಸಹ ಆಟಗಾರ ಸ್ಟಾನ್ ವಾವ್ರಿಂಕ ಅಥವಾ ಗ್ರೀಕ್ನ 6ನೇ ಶ್ರೇಯಾಂಕದ ಸ್ಟೆಫನೊಸ್ ಸಿಟ್ಸಿಪಾಸ್ರನ್ನು ಎದುರಿಸಲಿದ್ದಾರೆ. ಗ್ರಾನ್ಸ್ಲಾಮ್ ಟೂರ್ನಿಯಲ್ಲಿ 54ನೇ ಕ್ವಾರ್ಟರ್ ಫೈನಲ್ ಪಂದ್ಯವನ್ನಾಡಲಿದ್ದಾರೆ.
Next Story