ಶಿಖರ್ ಧವನ್ ಸ್ಥಾನಕ್ಕೆ ಆಯ್ಕೆ ಸದ್ಯಕ್ಕಿಲ್ಲ: ಬಿಸಿಸಿಐ
ನಾಟಿಂಗ್ಹ್ಯಾಮ್, ಜೂ.11: ಗಾಯಾಳು ಶಿಖರ್ ಧವನ್ ಸ್ಥಾನಕ್ಕೆ ಬದಲಿ ಆಟಗಾರನನ್ನು ಬಿಸಿಸಿಐ ಇನ್ನೂ ಆಯ್ಕೆ ಮಾಡಿಲ್ಲ. ಶಿಖರ್ ಧವನ್ ಗಾಯಗೊಂಡಿದ್ದರೂ, ಅವರಿಗೆ ತವರಿಗೆ ವಾಪಸಾಗಲು ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿಲ್ಲ. ಧವನ್ ಲಂಡನ್ನಲ್ಲೇ ಉಳಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಗಾಯದಿಂದ ಚೇತರಿಸಿಕೊಳ್ಳುವುದನ್ನು ಬಿಸಿಸಿಐ ಎದುರು ನೋಡುತ್ತಿದೆ. ವೈದ್ಯರ ತಂಡ ನೀಡುವ ವರದಿನ್ನು ಪರಿಶೀಲಿಸಿದ ಬಳಿಕ ಬಿಸಿಸಿಐ ಮುಂದಿನ ಕ್ರಮಕೈಗೊಳ್ಳಲಿದೆ. ಅಷ್ಟರ ತನಕ ಯಾರನ್ನೂ ಅವರ ಸ್ಥಾನಕ್ಕೆ ಆಯ್ಕೆ ಮಾಡದ ನಿರ್ಧಾರವನ್ನು ಬಿಸಿಸಿಐ ಕೈಗೊಂಡಿದೆ.
Next Story