ವಿಶ್ವಕಪ್: ಕೊಹ್ಲಿ ಅರ್ಧಶತಕ, ಭಾರತ 224/8
ಸೌತಾಂಪ್ಟನ್, ಜೂ.22: ನಾಯಕ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಬಾರಿಸಿದ ಸತತ ಮೂರನೇ ಅರ್ಧಶತಕದ ಹೊರತಾಗಿಯೂ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ವಿಶ್ವಕಪ್ನ 28ನೇ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಮಾಡದೆ ನಿರಾಸೆಗೊಳಿಸಿತು.
ಟಾಸ್ ಜಯಿಸಿದ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಭಾರತ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 224 ರನ್ ಗಳಿಸಿತು.
ಭಾರತದ ಪರ ಕೊಹ್ಲಿ ಸರ್ವಾಧಿಕ ಸ್ಕೋರ್(67, 63 ಎಸೆತ, 5 ಬೌಂಡರಿ) ಗಳಿಸಿದರೆ, ಆಲ್ರೌಂಡರ್ ಕೇದಾರ್ ಜಾಧವ್(52, 68 ಎಸೆತ,3 ಬೌಂಡರಿ, 1 ಸಿಕ್ಸರ್ )ಕೆಳ ಕ್ರಮಾಂಕದಲ್ಲಿ ತಂಡವನ್ನು ಆಧರಿಸಿದರು.
ಆರಂಭಿಕ ಆಟಗಾರ ರಾಹುಲ್(30), ವಿಜಯ ಶಂಕರ್(29) ಹಾಗೂ ಎಂಎಸ್ ಧೋನಿ(28) ಎರಡಂಕೆಯ ಸ್ಕೋರ್ ಗಳಿಸಿದರು.
ರೋಹಿತ್ ಶರ್ಮಾ 4.2 ನೇ ಓವರ್ನಲ್ಲಿ 10 ಎಸೆತ ಎದುರಿಸಿ ಕೇವಲ 1 ರನ್ ಗಳಿಸಿ ಮುಜೀಬ್ವುರ್ರಹ್ಮಾನ್ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಆಗ 2ನೇ ವಿಕೆಟ್ಗೆ ರಾಹುಲ್ರೊಂದಿಗೆ ಕೊಹ್ಲಿ 57 ರನ್ ಹಾಗೂ 3ನೇ ವಿಕೆಟ್ಗೆ ವಿಜಯ ಶಂಕರ್ರೊಂದಿಗೆ 58 ರನ್ ಸೇರಿಸಿ ಜವಾಬ್ದಾರಿಯಿಂದ ಆಡಿದರು.
ಕೊಹ್ಲಿ 48 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 52ನೇ ಅರ್ಧಶತಕ ಸಿಡಿಸಿದರು. ಕೊಹ್ಲಿ 63 ಎಸೆತಗಳಲ್ಲಿ 67 ರನ್ ಗಳಿಸಿ ಮುಹಮ್ಮದ್ ನಬಿಗೆ (2-33)ವಿಕೆಟ್ ಒಪ್ಪಿಸಿದರು.