ಬಾಕ್ಸರ್ ವಿಜೇಂದರ್ಗೆ ಸತತ 11ನೇ ಜಯ
ನೆವಾರ್ಕ್, ಜು.14: ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಅಮೆರಿಕದ ವೃತ್ತಿಪರ ಬಾಕ್ಸಿಂಗ್ನಲ್ಲಿ ಅಮೆರಿಕದ ಬಾಕ್ಸರ್ ಮೈಕ್ ಸ್ನೈಡರ್ ವಿರುದ್ಧ ಟೆಕ್ನಿಕಲ್ ನಾಕೌಟ್ನ ಮೂಲಕ ಜಯ ಸಾಧಿಸಿದರು. ವಿಜೇಂದರ್ ವೃತ್ತಿಪರ ಬಾಕ್ಸಿಂಗ್ನಲ್ಲಿ ಸತತ 11ನೇ ಗೆಲುವು ದಾಖಲಿಸಿದರು.
ಹರ್ಯಾಣದ 33ರ ಹರೆಯದ ವಿಜೇಂದರ್ ಇನ್ನೂ ನಾಲ್ಕು ಸುತ್ತುಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿದರು. ನಾಲ್ಕನೇ ಸುತ್ತಿನ ಎರಡನೇ ನಿಮಿಷದಲ್ಲಿ ವಿಜೇಂದರ್ ಜಯ ಒಲಿಯಿತು.
ಭಾರತ ಹಾಗೂ ಅಮೆರಿಕದಲ್ಲಿ ನನ್ನನ್ನು ಬೆಂಬಲಿಸಿರುವ ಎಲ್ಲ ಅಭಿಮಾನಿಗಳಿಗೆ, ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸುವೆ ಎಂದು ವಿಜೇಂದರ್ ಹೇಳಿದರು.
Next Story