ವಿಶ್ವಕಪ್ ಫೈನಲ್: ನ್ಯೂಝಿಲ್ಯಾಂಡ್ 241/8
ಲಂಡನ್, ಜು.14: ವೇಗದ ಬೌಲರ್ಗಳಾದ ಕ್ರಿಸ್ ವೋಕ್ಸ್(3-37) ಹಾಗೂ ಪ್ಲಂಕೆಟ್(3-42) ದಾಳಿಗೆ ನಲುಗಿದ ನ್ಯೂಝಿಲ್ಯಾಂಡ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿದೆ.
ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅಗ್ರ ಸರದಿಯ ಬ್ಯಾಟ್ಸ್ಮನ್ ನಿಕೊಲ್ಸ್(55, 77 ಎಸೆತ) ಅರ್ಧಶತಕ ಕೊಡುಗೆ ನೀಡಿದರು.
ನಾಯಕ ವಿಲಿಯಮ್ಸನ್(30, 53 ಎಸೆತ) ಹಾಗೂ ಟಾಮ್ ಲಥಾಮ್(47) ಒಂದಷ್ಟು ಪ್ರತಿರೋಧ ಒಡ್ಡಿದರು. ಉಳಿದ ಆಟಗಾರರು ಹೋರಾಟ ನೀಡಲಿಲ್ಲ.
Next Story