ಅಲ್ಲಾಹನು ನಮ್ಮೊಂದಿಗಿದ್ದಾನೆ ಎಂದು ಆದಿಲ್ ರಶೀದ್ ಹೇಳಿದ್ದರು: ಇಂಗ್ಲೆಂಡ್ ನಾಯಕ ಇಯೋನ್ ಮೋರ್ಗನ್
ಹೊಸದಿಲ್ಲಿ, ಜು.15: “ಗೆಲುವಿನ ಬಗ್ಗೆ ನನಗೆ ಭರವಸೆ ಇತ್ತು. ನಾನು ಆದಿಲ್ ರಶೀದ್ ಜೊತೆ ಮಾತನಾಡಿದೆ. ಅಲ್ಲಾಹನು ನಮ್ಮೊಂದಿಗಿದ್ದಾನೆ ಎಂದವರು ಹೇಳಿದರು” ಎಂದು ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಇಯೋನ್ ಮೋರ್ಗನ್ ಹೇಳಿದ್ದಾರೆ.
ವಿಶ್ವಕಪ್ ವಿಜಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ತಂಡದಲ್ಲಿ ವಿವಿಧ ಹಿನ್ನೆಲೆ ಮತ್ತು ಸಂಸ್ಕೃತಿಯ ಸದಸ್ಯರಿದ್ದಾರೆ. ವಿವಿಧ ದೇಶಗಳಲ್ಲಿ ಜನಿಸಿದ ಸದಸ್ಯರಿದ್ದರೂ ತಂಡಕ್ಕಾಗಿ ಅವರು ಆಟವಾಡುವಾಗ ಹೆಮ್ಮೆಯೆನಿಸುತ್ತಿದೆ” ಎಂದು ಹೇಳಿದರು.
ಫೈನಲ್ನಲ್ಲಿ ನ್ಯೂಝಿಲ್ಯಾಂಡನ್ನು ಮಣಿಸಿ ಮೊದಲ ಬಾರಿ ವಿಶ್ವಕಪ್ ಗೆದ್ದುಕೊಂಡಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ನಡೆದ ಫೈನಲ್ನಲ್ಲಿ ನ್ಯೂಝಿಲ್ಯಾಂಡನ್ನು ಉತ್ತಮ ಪ್ರದರ್ಶನ( ಗರಿಷ್ಠ ಬೌಂಡರಿ) ಆಧಾರದಲ್ಲಿ ಮಣಿಸಿದ ಇಂಗ್ಲೆಂಡ್ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿ ವಿಶ್ವಕಪ್ ಪ್ರಶಸ್ತಿ ಜಯಿಸಿದೆ.
Next Story