ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡದ ಬಗ್ಗೆ ಹೆಮ್ಮೆಯಿದೆ: ಜಸಿಂಡಾ ಅರ್ಡೆರ್ನ್
ಕ್ರೈಸ್ಟ್ಚರ್ಚ್, ಜು.16: ನ್ಯೂಝಿಲ್ಯಾಂಡ್ ಪ್ರಧಾನಮಂತ್ರಿ ಜಸಿಂಡಾ ಅರ್ಡೆರ್ನ್ ರಾತ್ರಿ ಇಡೀ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಿದ್ದು, ನಮ್ಮ ತಂಡ ಸೋತಿದ್ದಕ್ಕೆ ಬೇಸರವಿಲ್ಲ. ಬದಲಿಗೆ ಹೆಮ್ಮೆಯಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು. ‘‘ಆ ಒಂದು ಸೂಪರ್ ಓವರ್ ನಮ್ಮ ದೇಶಕ್ಕೆ ಒಂದು ವರ್ಷದಂತೆ ಆಗಿದೆ. ನಮ್ಮ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ’’ ಎಂದು ಜಸಿಂಡಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Next Story