ಸಿಂಧು ಸೆಮಿಫೈನಲ್ ಗೆ
ಇಂಡೋನೇಶ್ಯ ಓಪನ್
ಓಪನ್ ಜಕಾರ್ತಾ, ಜು.19: ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಇಂಡೋನೇಶ್ಯ ಓಪನ್ ಟೂರ್ನಮೆಂಟ್ನ ಕ್ವಾರ್ಟರ್ ಫೈನಲ್ನಲ್ಲಿ ಶುಕ್ರವಾರ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಪಿ.ವಿ.ಸಿಂಧು ಅವರು ಜಪಾನ್ನ ನೊರೊಮಿ ಒಕುಹರಾ ಅವರನ್ನು 21-14, 21-7 ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ತಲುಪಿದರು.
ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಜಯಿಸಿದ 5ನೇ ಶ್ರೇಯಾಂಕದ ಆಟಗಾರ್ತಿ ಸಿಂಧು ಕೇವಲ 44 ನಿಮಿಷಗಳಲ್ಲಿ ನೊರೊಮಿ ಅವರ ಸವಾಲನ್ನು ಹಿಮ್ಮೆಟ್ಟಿಸಿದರು.
ಸೆಮಿಫೈನಲ್ನಲ್ಲಿ ಸಿಂಧು ಅವರು ಚೀನಾದ ಯು ಫೆಯಿರನ್ನು ಎದುರಿಸಲಿದ್ದಾರೆ.
ಸಿಂಧು ಕ್ವಾರ್ಟರ್ಫೈನಲ್ನಲ್ಲಿ ಆಟದ ಆರಂಭದಿಂದ ಅಂತ್ಯದ ತನಕ ಎದುರಾಳಿಗೆ ಚೇತರಿಸಿಕೊಳ್ಳಲು ಯಾವುದೇ ಅವಕಾಶ ನೀಡಲಿಲ್ಲ.
Next Story