ಮರಿನ್ಗೆ ಸೋಲುಣಿಸಿದ ನಡಾಲ್ ಕ್ವಾ.ಫೈನಲ್ಗೆ
ಯು.ಎಸ್. ಓಪನ್
ನ್ಯೂಯಾರ್ಕ್, ಸೆ.3: ಸ್ಪೇನ್ನ ರಫೆಲ್ ನಡಾಲ್ ಯು.ಎಸ್. ಓಪನ್ನ ಪುರುಷರ ಸಿಂಗಲ್ಸ್ನಲ್ಲಿ ಮರಿನ್ ಸಿಲಿಕ್ರನ್ನು ಮಣಿಸಿ ನಾಲ್ಕನೇ ಸುತ್ತು ತಲುಪಿದ್ದಾರೆ.
ಇಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ನಡಾಲ್ ಕ್ರೋಯೇಶಿಯದ ಸಿಲಿಕ್ರನ್ನು 6-3, 3-6, 6-1, 6-2 ಸೆಟ್ಗಳಿಂದ ಮಣಿಸಿದರು.
ಮೊದಲ ಸೆಟ್ನ್ನು 6-3 ಅಂತರದಿಂದ ಗೆದ್ದುಕೊಂಡ ನಡಾಲ್ ಆರಂಭದಲ್ಲಿ ಬಿಗಿಹಿಡಿತ ಸಾಧಿಸಿದರು. ಬಿಗ್ ಹಿಟ್ಟರ್ ಸಿಲಿಕ್ ಎರಡನೇ ಸೆಟನ್ನು 6-3 ಅಂತರದಿಂದ ಗೆದ್ದುಕೊಂಡು ತಿರುಗೇಟು ನೀಡಿದರು. ಗಾಳಿಯಲ್ಲಿ ಮೇಲಕ್ಕೆ ಜಿಗಿದು ಆಕರ್ಷಕ ಓವರ್ಹೆಡ್ ಸ್ಮಾಷ್ ಹೊಡೆದ ನಡಾಲ್ ಸ್ಟೇಡಿಯಂನಲ್ಲಿ ವಿದ್ಯುತ್ ಸಂಚಲನ ಉಂಟು ಮಾಡಿದರು.
ಮೂರು ಹಾಗೂ ನಾಲ್ಕನೇ ಸೆಟನ್ನು 6-1, 6-2 ಅಂತರದಿಂದ ಗೆದ್ದುಕೊಂಡ ನಡಾಲ್ ಗ್ರಾನ್ಸ್ಲಾಮ್ ಟೂರ್ನಿಯಲ್ಲಿ 40ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. 33ರ ಹರೆಯದ ನಡಾಲ್ ಈ ತನಕ ಟೂರ್ನಿಯಲ್ಲಿ ಕಠಿಣ ಸವಾಲು ಎದುರಿಸಿಲ್ಲ. ಕೇವಲ ಒಂದು ಸೆಟನ್ನು ಮಾತ್ರ ಕಳೆದುಕೊಂಡಿದ್ದಾರೆ.
18 ಬಾರಿಯ ಗ್ರಾನ್ಸ್ಲಾಮ್ ಚಾಂಪಿಯನ್ ನಡಾಲ್ ಮುಂದಿನ ಸುತ್ತಿನಲ್ಲಿ ಅರ್ಜೆಂಟೀನದ ಡಿಯಾಗೊ ಸ್ವೆಟ್ಜ ರ್ಮನ್ರನ್ನು ಎದುರಿಸಲಿದ್ದಾರೆ.