ಇಟಲಿಯ ಮ್ಯಾ ಟಿಯೊ ಬೆರೆಟ್ಟಿನಿ ಕ್ವಾರ್ಟರ್ ಫೈನಲ್ಗೆ ಲಗ್ಗೆ
ನ್ಯೂಯಾರ್ಕ್, ಸೆ.3: ಮ್ಯಾಟಿಯೊ ಬೆರೆಟ್ಟಿನಿ ಯು.ಎಸ್. ಓಪನ್ ಟೆನಿಸ್ ಟೂರ್ನಮೆಂಟ್ನಲ್ಲಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿರುವ ಇಟಲಿಯ ಎರಡನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.
ಸೋಮವಾರ ನಡೆದ ಪುರುಷರ ಸಿಂಗಲ್ಸ್ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ 24ನೇ ಶ್ರೇಯಾಂಕದ ಬೆರೆಟ್ಟಿನಿ ರಶ್ಯದ 43ನೇ ರ್ಯಾಂಕಿನ ಆ್ಯಂಡ್ರೂ ರುಬ್ಲೆವ್ರನ್ನು 6-1, 6-4, 7-6(8/6)ಸೆಟ್ಗಳಿಂದ ಮಣಿಸಿ ಮೊದಲ ಬಾರಿ ಗ್ರಾನ್ಸ್ಲಾಮ್ ಟೂರ್ನಿಯಲ್ಲಿ ಅಂತಿಮ-8ರ ಹಂತ ತಲುಪಿದರು. 42 ವರ್ಷಗಳ ಬಳಿಕ ಯುಎಸ್ ಓಪನ್ನಲ್ಲಿ ಈ ಸಾಧನೆ ಮಾಡಿದ ಇಟಲಿಯ ಎರಡನೇ ಆಟಗಾರ ಎನಿಸಿಕೊಂಡರು. ಕೊರಾಡೊ ಬರಾಝುಟ್ಟಿ ಈ ಸಾಧನೆ ಮಾಡಿದ್ದರು.
Next Story