ಯುಎಸ್ ಓಪನ್: ಕ್ವಾರ್ಟರ್ ಫೈನಲ್ ನಲ್ಲಿ ಡಿಮಿಟ್ರೊವ್ ಗೆ ಶರಣಾದ ಫೆಡರರ್
ನ್ಯೂಯಾರ್ಕ್,ಸೆ.4: ಹಿರಿಯ ಟೆನಿಸ್ ಪಟು ರೋಜರ್ ಫೆಡರರ್ ಯುಎಸ್ ಓಪನ್ನ ಕ್ವಾರ್ಟರ್ ಫೈನಲ್ನಲ್ಲಿ ಎಡವಿ ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಫೆಡರರ್ ಬಲ್ಗೇರಿಯದ ಗ್ರಿಗೊರ್ ಡಿಮಿಟ್ರೊವ್ ವಿರುದ್ಧ 6-3, 4-6, 6-3, 4-6, 2-6 ಸೆಟ್ ಗಳಿಂದ ಸೋತಿದ್ದಾರೆ.
78ನೇ ರ್ಯಾಂಕಿನ ಆಟಗಾರ ಡಿಮಿಟ್ರೊವ್ 28 ವರ್ಷಗಳ ಬಳಿಕ ಯು.ಎಸ್. ಓಪನ್ನಲ್ಲಿ ಸೆಮಿ ಫೈನಲ್ಗೆ ತಲುಪಿದ ಕೆಳ ರ್ಯಾಂಕಿನ ಆಟಗಾರನಾಗಿದ್ದಾರೆ.
ಶುಕ್ರವಾರ ನಡೆಯಲಿರುವ ಸೆಮಿ ಫೈನಲ್ ನಲ್ಲಿ ಡಿಮಿಟ್ರೊವ್ ರಶ್ಯದ ಡೇನಿಲ್ ಮೆಡ್ವೆಡೆವ್ ರನ್ನು ಎದುರಿಸಲಿದ್ದಾರೆ. ಮಡ್ವೆಡೆವ್ ಮೂರು ಬಾರಿಯ ಚಾಂಪಿಯನ್ ಸ್ಟಾನ್ ವಾವ್ರಿಂಕರನ್ನು 7-6(8/6), 6-3, 3-6, 6-1 ಸೆಟ್ ಗಳಿಂದ ಮಣಿಸಿ ಮೊದಲ ಬಾರಿ ಸೆಮಿ ಫೈನಲ್ಗೆ ತಲುಪಿದ್ದರು.
Next Story