ಬಿರಿಯಾನಿ ಸೇವಿಸದಂತೆ ಪಾಕ್ ಕ್ರಿಕೆಟಿಗರಿಗೆ ನೂತನ ಕೋಚ್ ಮಿಸ್ಬಾ ಎಚ್ಚರಿಕೆ !
ಕರಾಚಿ, ಸೆ.17: ಪಾಕಿಸ್ತಾನ ಕ್ರಿಕೆಟ್ ಆಟಗಾರರ ಫಿಟ್ನೆಸ್ ಸಮಸ್ಯೆಯನ್ನು ನಿವಾರಿಸಲು ಆಹಾರ ಪದ್ಧತಿಯಲ್ಲಿ ಸಮಗ್ರ ಬದಲಾವಣೆಗೆ ಚಿಂತನೆ ನಡೆಸಿರುವ ನೂತನ ಕೋಚ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಮಿಸ್ಬಾ ಉಲ್ ಹಕ್ ಅವರು “ಹೆಚ್ಚು ಬಿರಿಯಾನಿ ತಿನ್ನಬೇಡಿ. ಕೊಬ್ಬಿನ ಅಂಶವಿರುವ ಮಾಂಸ ಹಾಗೂ ಸಿಹಿ ತಿಂಡಿಯನ್ನು ಮುಟ್ಟದಂತೆ ''ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಹೆಚ್ಚು ಹಣ್ಣು ತಿನ್ನಬೇಕು. ಖಾದ್ಯಗಳನ್ನು ಸೇವಿಸಬಾರದು ಎಂದು ಪಾಕ್ ತಂಡದ ಆಟಗಾರರಿಗೆ ಮಿಸ್ಬಾ ಸೂಚನೆ ನೀಡಿದ್ದಾರೆ.
ಕಳೆದ ಐಸಿಸಿ ವಿಶ್ವಕಪ್ ಟೂರ್ನಮೆಂಟ್ ವೇಳೆ ಪಾಕಿಸ್ತಾನದ ಕ್ರಿಕೆಟ್ ತಂಡದ ಆಟಗಾರರ ಫಿಟ್ನೆಸ್ ಸಮಸ್ಯೆ ಆಟದ ಮೇಲೆ ಪರಿಣಾಮ ಬೀರಿತ್ತು ಎಂದು ಹೇಳಲಾಗಿತ್ತು. ಇದೀಗ ತಂಡವನ್ನು ಬಲಿಷ್ಠವಾಗಿ ಕಟ್ಟುವ ಯೋಚನೆ ಮಾಡಿರುವ ಮಿಸ್ಬಾ ಅವರು ತಂಡದ ಆಟಗಾರರಿಗೆ ಆಹಾರದ ಬಗ್ಗೆ ಮೆನು ತಯಾರಿಸಿದ್ದಾರೆ. ತಂಡಕ್ಕೆ ಆಹಾರ ಪೂರೈಸುವ ಸಂಸ್ಥೆಗೆ ಈ ಬಗ್ಗೆ ಆದೇಶ ನೀಡಿದ್ದಾರೆಂದು ತಿಳಿದು ಬಂದಿದೆ.
Next Story