2ನೇ ಟ್ವೆಂಟಿ-20 ಪಂದ್ಯ: ಭಾರತಕ್ಕೆ 7 ವಿಕೆಟ್ಗಳ ಜಯ
ಕೊಹ್ಲಿ ಅರ್ಧಶತಕ
ಮೊಹಾಲಿ, ಸೆ.18: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಇಂದು ಭಾರತ 7 ವಿಕೆಟ್ಗಳ ಜಯ ಗಳಿಸಿದೆ.
ಗೆಲುವಿಗೆ 150 ರನ್ಗಳ ಸವಾಲನ್ನು ಪಡೆದ ಭಾರತ ಇನ್ನೂ 6 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ 151 ರನ್ ಗಳಿಸಿ ಗೆಲುವಿನ ದಡ ಸೇರಿತು.
ನಾಯಕ ವಿರಾಟ್ ಕೊಹ್ಲಿ ಔಟಾಗದೆ 72ರನ್( 52 ಎ, 4ಬೌ, 3ಸಿ) ಗಳಿಸಿದರು. ಶಿಖರ್ ಧವನ್ 40 ರನ್(31ಎ, 4ಬೌ, 1ಸಿ) ಗಳಿಸಿ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.
ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ 12ರನ್, ರಿಷಭ್ ಪಂತ್ 4ರನ್ ಮತ್ತು ಶ್ರೇಯಸ್ ಅಯ್ಯರ್ ಔಟಾಗದೆ 16 ರನ್ ಗಳಿಸಿದರು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 149 ರನ್ ಗಳಿಸಿತ್ತು.
Next Story