ಬಂಗಾಳಕ್ಕೆ ರೋಚಕ ಜಯ
ಪ್ರೊ ಕಬಡ್ಡಿ ಲೀಗ್
ಜೈಪುರ, ಸೆ.22: ಪ್ರೊ ಕಬಡ್ಡಿ ಲೀಗ್ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಆತಿಥೇಯ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 41-40 ಅಂತರದಿಂದ ಮಣಿಸಿದ ಬಂಗಾಳ ವಾರಿಯರ್ಸ್ ಟೂರ್ನಿಯಲ್ಲಿ ತನ್ನ ಗೆಲುವಿನ ಓಟ ಮುಂದುವರಿಸಿತು.
ಬಂಗಾಳದ ಪರ ಮಣಿಂದರ್ ಸಿಂಗ್ 19 ಅಂಕ ಗಳಿಸಿ ಮಹತ್ವದ ಕೊಡುಗೆ ನೀಡಿದರು.ಜೈಪುರಕ್ಕೆ ನೀಲೇಶ್ 15 ಹಾಗೂ ದೀಪಕ್ ಹೂಡ 10 ಅಂಕಗಳ ಕೊಡುಗೆ ನೀಡಿದರು.
18ನೇ ಪಂದ್ಯದಲ್ಲಿ 11ನೇ ಜಯ ದಾಖಲಿಸಿದ ವಾರಿಯರ್ಸ್ ಒಟ್ಟು 68 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ಇದಕ್ಕೂ ಮೊದಲು ನಡೆದ 102ನೇ ಪಂದ್ಯದಲ್ಲಿ ಮುಂಬಾ ತಂಡ ಗುಜರಾತ್ ಫೋರ್ಚುನ್ಜೈಂಟ್ಸ್ ತಂಡವನ್ನು 31-25 ಅಂತರದಿಂದ ಮಣಿಸಿತು. 17ರಲ್ಲಿ 9ನೇ ಗೆಲುವು ದಾಖಲಿಸಿದ ಮುಂಬಾ 53 ಅಂಕ ಗಳಿಸಿದೆ. ಮುಂಬಾ ಪರ ಅಭಿಷೇಕ್ ಸಿಂಗ್ 11 ಅಂಕಗಳಿಸಿದರು.
Next Story