ದಿಲ್ಲಿ ದರ್ಬಾರ್ ಅಬಾಧಿತ
ಪ್ರೊ ಕಬಡ್ಡಿ ಲೀಗ್
ಜೈಪುರ, ಸೆ.26: ದಿಲ್ಲಿ ದಬಾಂಗ್ ತಂಡ 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ತನ್ನ ದರ್ಬಾರ್ ಮುಂದುವರಿಸಿದೆ. ಮೂರು ಬಾರಿ ಚಾಂಪಿಯನ್ಪಟ್ಟಕ್ಕೇರಿದ್ದ ಪಾಟ್ನಾ ಪೈರೇಟ್ಸ್ ತಂಡವನ್ನು 43-39 ಅಂಕಗಳ ಅಂತರದಿಂದ ಮಣಿಸಿತು. ಗುರುವಾರ ನಡೆದ 108ನೇ ಪಂದ್ಯದಲ್ಲಿ ಪಾಟ್ನಾ ಪರ ಪರ್ದೀಪ್ ನರ್ವಾಲ್(19 ಅಂಕ)ಮತ್ತೊಮ್ಮೆ ಏಕಾಂಗಿ ಹೋರಾಟ ನೀಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಪಾಟ್ನಾ 19ನೇ ಪಂದ್ಯದಲ್ಲಿ 12ನೇ ಸೋಲು ಕಂಡಿದೆ. 18ನೇ ಪಂದ್ಯದಲ್ಲಿ 14ನೇ ಜಯ ದಾಖಲಿಸಿ ಒಟ್ಟು 77 ಅಂಕ ಗಳಿಸಿದ ದಿಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ದಿಲ್ಲಿ ಪರ ವಿಜಯ್(13) ಹಾಗೂ ನವೀನ್ಕುಮಾರ್(11)ಗೆಲುವಿನ ಕಾಣಿಕೆ ನೀಡಿದರು.
Next Story