ಚೀನಾ ಓಪನ್: ದ್ವಿತೀಯ ಸುತ್ತಿನಲ್ಲಿ ಹಾಲೆಪ್ಗೆ ಸೋಲು
ಬೀಜಿಂಗ್, ಸೆ.30: ರೊಮಾನಿಯದ ಸಿಮೊನಾ ಹಾಲೆಪ್ ಚೀನಾ ಓಪನ್ನ ಎರಡನೇ ಸುತ್ತಿನಲ್ಲಿ ಸೋತಿದ್ದಾರೆ.
ಬೆನ್ನುನೋವಿನಿಂದ ಬಳಲುತ್ತಿರುವಂತೆ ಕಂಡು ಬಂದ ಹಾಲಿ ವಿಂಬಲ್ಡನ್ ಚಾಂಪಿಯನ್ ಹಾಲೆಪ್ 64 ನಿಮಿಷಗಳ ಕಾಲ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ರಶ್ಯದ ಎಕಟೆರಿನಾ ಅಲೆಕ್ಸಾಂಡ್ರೊವಾ ವಿರುದ್ಧ 3-6, 3-6 ನೇರ ಸೆಟ್ಗಳಿಂದ ಸೋತಿದ್ದಾರೆ. ವಿಶ್ವದ ಐದನೇ ರ್ಯಾಂಕಿನ ಆಟಗಾರ್ತಿ ಸಿಮೊನಾ 38ನೇ ರ್ಯಾಂಕಿನ ಅಲೆಕ್ಸಾಂಡ್ರೊವಾಗೆ ಸುಲಭವಾಗಿ ಶರಣಾದರು. ಹಾಲೆಪ್ ಕಳೆದ ವಾರ ನಡೆದ ವುಹಾನ್ ಓಪನ್ನಲ್ಲಿ ಬೆನ್ನುನೋವಿನಿಂದಾಗಿ ಬೇಗನೇ ಸೋತು ಹೊರ ನಡೆದಿದ್ದರು. ಅಮೆರಿಕ ಓಪನ್ನಲ್ಲಿ ಅತ್ಯಮೋಘ ಪ್ರದರ್ಶನ ನೀಡಿದ್ದ ಕೆನಡಾದ 19ರ ಹರೆಯದ ಆಟಗಾರ್ತಿ ಬಿಯಾಂಕಾ ಅಂಡ್ರೀಸ್ಕು ಬೆಲಾರಸ್ನ 60ನೇ ರ್ಯಾಂಕಿನ ಅಲಿಯಾಸಾಂಡ್ರಾ ಸಾಸ್ನೊವಿಚ್ ವಿರುದ್ಧ 6-2, 2-6, 6-1 ಸೆಟ್ಗಳ ಅಂತರದಿಂದ ಜಯ ಸಾಧಿಸಿದರು.
ಅಮೆರಿಕ ಓಪನ್ ಫೈನಲ್ನಲ್ಲಿ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ಗೆ ಶಾಕ್ ನೀಡಿ ಪ್ರಶಸ್ತಿ ಎತ್ತಿ ಹಿಡಿದಿದ್ದ ಬಿಯಾಂಕಾ ಇದೀಗ ವಿಶ್ವ ರ್ಯಾಂಕಿಂಗ್ನಲ್ಲಿ ಆರನೇ ಸ್ಥಾನದಲ್ಲಿದ್ದಾರೆ.