ಪ್ರೊ ಕಬಡ್ಡಿ: ಲೀಗ್ ಹಂತದ ಪಂದ್ಯಕ್ಕೆ ತೆರೆ, ಅ.14ರಿಂದ ಪ್ಲೇ-ಆಫ್ ಆರಂಭ
ಬುಲ್ಸ್ ವಿರುದ್ಧ ಯೋಧಾಕ್ಕೆ ಜಯ, ದಿಲ್ಲಿ-ಮುಂಬಾ ಪಂದ್ಯ ಟೈ
ಗ್ರೇಟರ್ ನೊಯ್ಡ, ಅ.11: ಅಂಕಪಟ್ಟಿಯಲ್ಲಿ ಅಗ್ರಸ್ಥಾನ ದಲ್ಲಿರುವ ದಿಲ್ಲಿ ದಬಾಂಗ್ ಹಾಗೂ ಯು ಮುಂಬಾ ತಂಡಗಳು ಶುಕ್ರವಾರ ಆಡಿದ 7ನೇ ಆವೃತ್ತಿಯ ಕಬಡ್ಡಿ ಲೀಗ್ನ ತಮ್ಮ ಕೊನೆಯ ಲೀಗ್ ಪಂದ್ಯವನ್ನು 37-37 ಅಂತರದಿಂದ ಟೈಗೊಳಿಸಿ ಸಮಬಲದ ಪೈಪೋಟಿ ನೀಡಿದವು.
132ನೇ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ಯು.ಪಿ.ಯೋಧಾ ತಂಡ ಬೆಂಗಳೂರು ಬುಲ್ಸ್ ತಂಡವನ್ನು 45-33 ಅಂಕಗಳ ಅಂತರದಿಂದ ಮಣಿಸಿ ಗೆಲುವಿನೊಂದಿಗೆ ಲೀಗ್ ಹಂತವನ್ನು ಕೊನೆಗೊಳಿಸಿತು. ಯೋಧಾ ಪರ ಶ್ರೀಕಾಂತ್ ಜಾಧವ್ ಹಾಗೂ ಸುರಿಂದರ್ ಸಿಂಗ್ ತಲಾ 9 ಅಂಕ ಗಳಿಸಿದರು. ಬುಲ್ಸ್ ಪರ ಪವನ್ ಕುಮಾರ್ 13 ಅಂಕ ಗಳಿಸಿದರು.
ಲೀಗ್ನ ಪ್ಲೇ-ಆಫ್ ಪಂದ್ಯಗಳು ಅ.14ರಿಂದ ಆರಂಭವಾಗಲಿದ್ದು, ಅ.19 ರಂದು ಫೈನಲ್ ಪಂದ್ಯ ನಡೆಯಲಿದೆ. ದಿಲ್ಲಿ 22ನೇ ಪಂದ್ಯದಲ್ಲಿ 3ನೇ ಬಾರಿ ಟೈ ಸಾಧಿಸಿದರೆ, ಮುಂಬಾ 2ನೇ ಬಾರಿ ಟೈ ಸಾಧಿಸಿತು. ದಿಲ್ಲಿ 15ರಲ್ಲಿ ಗೆಲುವು ದಾಖಲಿಸಿ ಒಟ್ಟು 85 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿತು. ಮುಂಬಾ 22ರಲ್ಲಿ 14ರಲ್ಲಿ ಗೆಲುವು ದಾಖಲಿಸಿ ಮೂರನೇ ಸ್ಥಾನದಲ್ಲಿದೆ.
ದಬಾಂಗ್ ಪರ ನವೀನ್ಕುಮಾರ್(12) ಹಾಗೂ ಮುಂಬಾ ಪರ ಅಭಿಷೇಕ್ ಸಿಂಗ್(10) ಉತ್ತಮ ಪ್ರದರ್ಶನ ನೀಡಿದರು.