ವಿಶ್ವ ದಾಖಲೆಯೊಂದಿಗೆ ಸ್ವರ್ಣ ಗೆದ್ದ ಸಂದೀಪ್
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್
ಹೊಸದಿಲ್ಲಿ, ನ.8: ದೋಹಾದಲ್ಲಿ ಶುಕ್ರವಾರ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಸಂದೀಪ್ ಚೌಧರಿ ಹಾಗೂ ಸುಮಿತ್ ಅಂಟಿಲ್ ಎಫ್64 ವಿಭಾಗದಲ್ಲಿ ವಿಶ್ವ ದಾಖಲೆ ಮುರಿಯುವ ಜೊತೆಗೆ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಯ ಪದಕ ಜಯಿಸಿದರು. ಸಂದೀಪ್ ಟೋಕಿಯೊ ಒಲಿಂಪಿಕ್ಸ್ಗೆ ಸ್ಥಾನವನ್ನು ಪಡೆದರು. ಸಂದೀಪ್ ಎಫ್64 ವಿಭಾಗದಲ್ಲಿ 66.18 ಮೀ.ದೂರಕ್ಕೆ ಜಾವೆಲಿನ್ ಎಸೆದು ಸ್ವರ್ಣ ಸಂಪಾದಿಸಿದರು. ತನ್ನದೇ ವಿಶ್ವ ದಾಖಲೆ(65.80 ಮೀ.)ಯನ್ನು ಮುರಿದರು. ಸುಮಿತ್ ಅಂಟಿಲ್ 62.88 ಮೀ. ದೂರಕ್ಕೆ ಜಾವೆಲಿನ್ ಎಸೆದು ತನ್ನದೇ ವಿಶ್ವ ದಾಖಲೆ(60.45 ಮೀ.)ಮುರಿದು ಬೆಳ್ಳಿ ಜಯಿಸಿದರು. ಈ ಇಬ್ಬರು ಅಥ್ಲೀಟ್ಗಳಿಗೆ ಕ್ರೀಡಾ ಸಚಿವ ಕಿರಣ್ ರೆಜಿಜು ಅಭಿನಂದನೆ ಸಲ್ಲಿಸಿದ್ದಾರೆ.
Next Story