ಡೇ -ನೆಟ್ ಟೆಸ್ಟ್ ಗೆ ಗಂಟೆ ಬಾರಿಸಲಿರುವ ಮಮತಾ -ಹಸೀನಾ
ಕೋಲ್ಕತಾ , ನ.8: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನವೆಂಬರ್ 22ರಂದು ಕೋಲ್ಕತಾ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಮೊದಲ ಹಗಲು-ರಾತ್ರಿ ಟೆಸ್ಟ್ ಪ್ರಾರಂಭಕ್ಕೂ ಮುನ್ನ ಸಾಂಪ್ರದಾಯಿಕ ಈಡನ್ ಬೆಲ್ ಬಾರಿಸಲಿದ್ದಾರೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಭಾಗವಹಿಸಲಿದ್ದಾರೆ . ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ಮರಣಿಕೆಗಳನ್ನು ಗಣ್ಯರಿಗೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
Next Story