ಸೌರವ್ ಘೋಷಾಲ್ ಪ್ರಿ-ಕ್ವಾರ್ಟರ್ ಫೈನಲ್ಗೆ
ವಿಶ್ವ ಸ್ಕ್ವಾಷ್ ಚಾಂಪಿಯನ್ಶಿಪ್
ದೋಹಾ, ನ.11: ಭಾರತದ ಸೌರವ್ ಘೋಷಾಲ್ ಪಿಎಸ್ಎ ಪುರುಷರ ವರ್ಲ್ಡ್ ಸ್ಕ್ವಾಷ್ ಚಾಂಪಿಯನ್ಶಿಪ್ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಭಾರತ ನಂ.1 ಆಟಗಾರ ಸೌರವ್ ರವಿವಾರ ರಾತ್ರಿ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ ್ಸ ನ ಲುಕಾಸ್ ಸೆರ್ಮಿ ಅವರನ್ನು 11-8, 11-5, 11-5 ಅಂತರದಿಂದ ಸೋಲಿಸಿದರು. ಸೌರವ್ ಇದೀಗ ಎರಡನೇ ಬಾರಿ ಲುಕಾಸ್ರನ್ನು ಎದುರಿಸಿದರು. ಫೆಬ್ರವರಿಯಲ್ಲಿ ಚಿಕಾಗೊದಲ್ಲಿ ನಡೆದ ಪಿಎಸ್ಎ ವಿಶ್ವ ಚಾಂಪಿಯನ್ಶಿಪ್ನಲ್ಲಿ 2ನೇ ಸುತ್ತಿನಲ್ಲಿ ಈ ಇಬ್ಬರು ಆಟಗಾರರು ಸೆಣಸಾಡಿದ್ದರು. ಮಂಗಳವಾರ ನಡೆಯಲಿರುವ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ 10ನೇ ಶ್ರೇಯಾಂಕದ ಘೋಷಾಲ್ ಈಜಿಪ್ಟ್ನ ವಿಶ್ವದ ನಂ.2 ಹಾಗೂ ಅಗ್ರ ಶ್ರೇಯಾಂಕದ ಮುಹಮ್ಮದ್ ಎದುರಿಸಲಿದ್ದಾರೆ.
Next Story