ಅಜಿಂಕ್ಯ ರಹಾನೆ ಡೆಲ್ಲಿಗೆ
ಐಪಿಎಲ್
ಹೊಸದಿಲ್ಲಿ, ನ.14: ಐಪಿಎಲ್ ರಾಜಸ್ಥಾನ ರಾಯಲ್ಸ್ನಲ್ಲಿ 140 ಪಂದ್ಯಗಳನ್ನು ಆಡಿದ್ದ ಅಜಿಂಕ್ಯ ರಹಾನೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರ್ಪಡೆಯಾಗಲಿದ್ದಾರೆ.
2011ರಿಂದ 2015 ಮತ್ತು 2018ರಿಂದ 2019ನೇ ಆವೃತ್ತಿಗಳಲ್ಲಿ ರಹಾನೆ ರಾಜಸ್ಥಾನ ರಾಯಲ್ಸ್ನಲ್ಲಿ ಆಡಿದ್ದರು. ಇದೇ ವೇಳೆ ಡೆಲ್ಲಿ ಸ್ಪಿನ್ನರ್ಗಳಾದ ಮಾಯಾಂಕ್ ಮಾರ್ಕಂಡೆ ಮತ್ತು ರಾಹುಲ್ ಟೆವಾಟಿಯಾ ರಾಜಸ್ಥಾನಕ್ಕೆ ಸೇರಲಿದ್ದಾರೆ.
ಕಳೆದ ವರ್ಷ ಐಪಿಎಲ್ ಟೂರ್ನಿಯ ಆರಂಭದಲ್ಲಿ ರಹಾನೆ ರಾಯಲ್ಸ್ನ ನಾಯಕರಾಗಿದ್ದರು. ಆದರೆ ಅರ್ಧದಲ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. 24 ಪಂದ್ಯಗಳಲ್ಲಿ ಅವರು ನಾಯಕರಾಗಿದ್ದರು.
Next Story