ಮಿಕ್ಸೆಡ್ ಮಾರ್ಷಲ್ ಆರ್ಟ್ಸ್: ಚೊಚ್ಚಲ ಪಂದ್ಯದಲ್ಲಿ ಮಿಂಚಿದ ರಿತು ಫೋಗಟ್
ಬೀಜಿಂಗ್, ನ.16: ಭಾರತದ ಕುಸ್ತಿಪಟು ರಿತು ಫೋಗಟ್ ಮಿಕ್ಸೆಡ್ ಮಾರ್ಷಲ್ ಆಟ್ ್ಸರ್ ನಲ್ಲಿ ಹಾಗೂ ಒನ್ ಚಾಂಪಿಯನ್ಶಿಪ್ನಲ್ಲಿ ಯಶಸ್ವಿ ಪಾದಾರ್ಪಣೆಗೈದಿದ್ದು, ದಕ್ಷಿಣ ಕೊರಿಯಾದ ನ್ಯಾಮ್ ಹೀ ಕಿಮ್ ವಿರುದ್ಧ ಟೆಕ್ನಿಕಲ್ ನಾಕೌಟ್ನಲ್ಲಿ ಗೆಲುವು ಸಾಧಿಸಿದ್ದಾರೆ.
ಪಂದ್ಯದ ಮೊದಲ ಸೆಕೆಂಡ್ನಲ್ಲಿ ಫೋಗಟ್ ಅಂಕ ಗಳಿಸಿದರು. ಕೆಲವೇ ಕ್ಷಣದ ಬಳಿಕ ಮತ್ತೊಂದು ಅಂಕವನ್ನು ಕಲೆ ಹಾಕಿದರು.
ಫೋಗಟ್ ಕುಟುಂಬದ ನೀತು ತನ್ನ ಅದ್ಭುತ ಕುಸ್ತಿಯಿಂದ ಖ್ಯಾತರಾಗಿದ್ದಾರೆ.
ನಾನು ನನ್ನ ಸಹೋದರಿಯರು, ನನ್ನ ಕುಟುಂಬದವರು ಹಾಗೂ ನನಗೆ ಪ್ರೋತ್ಸಾಹ ನೀಡಿದವರಿಗೆ ಕೃತಜ್ಞತೆ ಸಲ್ಲಿಸಲು ಬಯಸಿದ್ದೇನೆ. ನನಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುವೆ. ನಾನು ಶೇ.100ರಷ್ಟು ಪ್ರಯತ್ನ ಹಾಕುತ್ತೇನೆಂದು ಭರವಸೆ ನೀಡುವೆ ಎಂದು ಫೋಗಟ್ ಹೇಳಿದ್ದಾರೆ.
Next Story