ದುಬೆ ಚೊಚ್ಚಲ ಅರ್ಧಶತಕ
ತಿರುವನಂತಪುರ, ಡಿ. 8: ವೆಸ್ಟ್ಇಂಡೀಸ್ ವಿರುದ್ಧ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತದ ಆಲ್ರೌಂಡರ್ ಶಿವಮ್ ದುಬೆ ಚೊಚ್ಚಲ ಅರ್ಧಶತಕ ದಾಖಲಿಸಿದರು.
26ರ ಹರೆಯದ ಮುಂಬೈನ ಆಟಗಾರ ದುಬೆ 5ನೇ ಟ್ವೆಂಟಿ-20 ಪಂದ್ಯವನ್ನಾಡುತ್ತಿದ್ದಾರೆ.ರವಿವಾರ ಅವರು 54 ರನ್ (30ಎ, 3ಬೌ,4ಸಿ) ಗಳಿಸಿ ವಾಲ್ಶ್ಗೆ ವಿಕೆಟ್ ಒಪ್ಪಿಸಿದರು.
ದುಬೆ 27 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ನಲ್ಲಿ ತನ್ನ ಮೊದಲ ಅರ್ಧಶತಕ ಪೂರ್ಣಗೊಳಿಸಿದರು. ಈ ಹಿಂದೆ ಔಟಾಗದೆ 9 ರನ್ ಗಳಿಸಿರುವುದು ದುಬೆ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು.
Next Story